ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜದಲ್ಲಿನ ನ್ಯೂನ್ಯತೆ ಗಳನ್ನು ಹೋಗಲಾಡಿಸಲು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕರ್ನಾಟಕವು ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ ಗ್ರಾಮಗಳ ನವನಿರ್ಮಾಣಕ್ಕೆ ಎನ್‌ಎಸ್‌ಎಸ್ ಸ್ವಯಂ ಸೇವಕರ ಮೂಲಕ ಕಾರ್ಯಕ್ರಮಗಳನ್ನು ಈ ವರ್ಷ ಹಮ್ಮಿಕೊಂಡಿದೆ ಎಂದು ಕುಲಸಚಿವೆ ಜಿ. ಅನುರಾಧ ಹೇಳಿದರು.
ಕುವೆಂಪು ವಿವಿ ಮಟ್ಟದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ಷಡಕ್ಷರಿ ಮಾತನಾಡಿ, ತಾವು ಎನ್‌ಎಸ್‌ಎಸ್ ಸ್ವಯಂ ಸೇವಕರಾಗಿದ್ದ ದಿನಗಳನ್ನು ಮೇಲುಕು ಹಾಕಿದರು. ಶಿಬಿರಗಳು ನಮಗೆ ಮಾನಸಿಕ ಬೌದ್ಧಿಕ ಹಾಗೂ ಆಂತರಿಕ ಆರೋಗ್ಯವನ್ನು ನೀಡುತ್ತವೆ. ಜೀವನದ ಯಶಸ್ಸಿಗೆ ಬೇಕಾದ ಮೂಲ ಅಂಶಗಳನ್ನು ಎನ್‌ಎಸ್‌ಎಸ್ ಕಲಿಸುತ್ತದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಮಂಜುನಾಥ ಸ್ವಾಮಿ ಮಾತನಾಡಿ, ಪದವಿ ಮತ್ತು ಅಂಕಗಳು ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಅವುಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಕೌಶಲಗಳು ಜೀವನ ರೂಪಿಸಿಕೊಳ್ಳಲು ಅಗತ್ಯ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಏಳು ದಿನಗಳ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೇಕೆರೆ, ಪ್ರಾಂಶುಪಾಲರಾದ ಡಾ. ಹೆಚ್. ಎಂ. ವಾಗ್ದೇವಿ, ಡಾ. ಕೆ.ಬಿ. ಧನಂಜಯ, ಪ್ರಭಾರ ಪ್ರಾಂಶುಪಾಲರಾದ ಡಾ. ಸರಳ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಶುಭ ಮರವಂತೆ, ಡಾ. ಹಾಲಮ್ಮ, ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಗಣೇಶ್ ಆರ್. ಕೆಂಚನಾಲ್, ಡಾ. ಪರಶುರಾಂ, ಡಾ. ಹಾ. ಮಾ. ನಾಗಾರ್ಜುನ, ಡಾ. ಪಿ. ವೆಂಕಟೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post