ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನ.21 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಫರ್ದಿಸಿರುವ ಡಿ.ಮಂಜುನಾಥ ಅವರನ್ನು ಆಯ್ಕೆ ಮಾಡುವಂತೆ ಜಿಲ್ಲೆಯ ಹಿರಿಯ ಸಾಹಿತಿಗಳು ಮನವಿ ಮಾಡಿದ್ದಾರೆ.
ಸದಾ ಕ್ರಿಯಾಶೀಲ ವ್ಯಕ್ತಿತ್ವದ ಡಿ.ಮಂಜುನಾಥ ಕನ್ನಡ ಸಾಹಿತ್ಯ ಪರಿಷತ್ತಿನ ಅಧಕ್ಷರಾಗಿ ಕಳೆದ ಮೂರು ಅವಧಿಯಲ್ಲಿ ಅನೇಕ ಸಾಹಿತ್ಯ ಸಾಂಸ್ಕೃತಿಕ ಕೆಲಸಗಳನ್ನು ಮಾಡಿದ್ದಾರೆ. ಅವರು ಸಂಘಟಿಸಿದ 73 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಜನರು ಇರುವಲ್ಲಿಯೇ ತೆರಳಿ ಮನೆ ಮನದಲ್ಲಿ ಸಾಹಿತ್ಯಾತ್ಮಕ ವಾತಾವರಣ ನಿರ್ಮಾಣ ಮಾಡಬೇಕು ಎಂಬ ಆಶಯದೊಂದಿಗೆ ಪ್ರಾರಂಭಗೊಂಡ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ 193 ನೇ ತಿಂಗಳ ಸಂಭ್ರಮದಲ್ಲಿದೆ. ಇದಕ್ಕೆ ಕಳಶವಿಟ್ಟಂತೆ ಶಾಲೆಗೊಂದು ಸಾಹಿತ್ಯಕಾರ್ಯಕ್ರಮ, ಮಕ್ಕಳ ಸಾಹಿತ್ಯ ಸಮ್ಮೇಳನ, ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ ಹೀಗೆ ಹಲವಾರು ನಾವಿನ್ಯ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಘಟಿಸಿದ ಕೀರ್ತಿ ಇವರದಾಗಿದೆ.
ನಮ್ಮ ಹಿರಿಯ ಸಾಹಿತಿಗಳ ಹೇಳುವ ಹಾಗೆ ಮಂಜುನಾಥ್ ಅಧ್ಯಕ್ಷರಾದಾಗಿದ್ದ ಅವಧಿಯನ್ನು ಸಾಹಿತ್ಯ ಚಟವಟಿಕೆಗಳ ಸುವರ್ಣಯುಗವೆನ್ನಬಹುದು. ಅನೇಕ ಪ್ರತಿಭಾನ್ವಿತರಿಗೆ ವೇದಿಕೆಗಳನ್ನು ನೀಡಿದ್ದಾರೆ. ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಶಾಶ್ವತ ನೆಲೆಯೊಂದನ್ನು ಸ್ಥಾಪಿಸುವ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಸಾಹಿತ್ಯ ಗ್ರಾಮ ಯೋಜನೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದು ಮೂಲ ಯೋಜನೆಯಂತೆ ನಿರ್ಮಿಸುವ ಮಹತ್ತರ ಕಾರ್ಯ ಬಾಕಿಯಿದೆ. ಇದರ ಜೊತೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕಗಳಲ್ಲಿ ನಿರ್ಮಾಣವಾಗುತ್ತಿದ್ದ ತಾಲ್ಲೂಕು ಕ.ಸಾ.ಪ ಕಟ್ಟಡಗಳು ಕಳೆದ ಐದು ವರ್ಷಗಳಿಂದ ಯಾವುದೇ ಕಾಮಾಗಾರಿಗಳನ್ನು ಕಾಣದೇ ವ್ಯರ್ಥವಾಗಿ ನಿಂತಿವೆ. ಅಂತಹ ಹಲವಾರು ಅಪೂರ್ಣಗೊಂಡ ಕ್ರಿಯಾಶೀಲ ಯೋಜನೆಗಳನ್ನು ಪೂರ್ಣಗೊಳಿಸಲು ಮಂಜುನಾಥ ಅವರಿಂದ ಸಾಧ್ಯವಿದೆ.
ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಹೊಸತನದ ಸ್ಪರ್ಶ ನೀಡಲುಸಾಹಿತ್ಯ ಸಾಂಸ್ಕೃತಿಕ ಪರಿಚಾರಕರಾಗಿರುವ ಡಿ.ಮಂಜುನಾಥ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ಸಾಂಸ್ಕೃತಿಕ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಹಿರಿಯ ಸಾಹಿತಿಗಳಾದ ಡಾ.ನಾ.ಡಿಸೋಜ, ಡಾ.ಕುಂ.ವೀರಭದ್ರಪ್ಪ, ಡಾ.ಸಣ್ಣರಾಮ, ಡಾ.ಜೆ.ಕೆ. ರಮೇಶ್, ಡಾ.ಗುಂಡಾಜೋಯಿಸ್, ಡಾ.ಮಾರ್ಷಲ್ ಶರಾಂ, ಡಾ.ಶಾಂತರಾಮ ಪ್ರಭು, ಸಾಗರದ ವಿ.ಗಣೇಶ್, ಡಾ.ಹೆಚ್.ಟಿ.ಕೃಷ್ಣಮೂರ್ತಿ, ಡಾ.ಜಯಶೀಲ, ಡಾ.ಮೋಹನ್‌ಚಂದ್ರಗುತ್ತಿ, ಡಾ.ಅಣ್ಣಪ್ಪ ಮಳೀಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post