ಕಲ್ಪ ಮೀಡಿಯಾ ಹೌಸ್ | ರಷ್ಯಾ |
ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದಾಗಿ ರಷ್ಯಾ ಕರಾವಳಿಯ ಆರ್ಕ್ಟಿಕ್ ಸಮುದ್ರ ಮಂಜುಗಡ್ಡೆಯಾಗ ಹೆಪ್ಪುಗಟ್ಟಿದ್ದು, 18 ಸರಕು ಹಡಗುಗಳು ನಡುವೆಯೇ ಸಿಲುಕಿಕೊಂಡಿವೆ.
ನಾರ್ವೇಜಿಯನ್ ಸುದ್ದಿ ತಾಣವಾದ ಬ್ಯಾರೆಂಟ್ಸ್ ಸೀ ಅಬ್ಸರ್ವರ್ ವರದಿಯಂತೆ, ಲ್ಯಾಪ್ಟೆವ್ ಸಮುದ್ರ ಮತ್ತು ಪೂರ್ವ ಸೈಬೀರಿಯನ್ ಸಮುದ್ರಗಳಲ್ಲಿ 30 ಸೆಂಮೀ ದಪ್ಪದ ಮಂಜುಗಡ್ಡೆಯು ರೂಪುಗೊಂಡಿದೆ. ಕಳೆದ ವರ್ಷಗಳಲ್ಲಿ, ಹವಾಮಾನ ಬದಲಾವಣೆಯಿಂದ ಉಂಟಾದ ಬೆಚ್ಚಗಿನ ಹವಾಮಾನವು ನವೆಂಬರ್’ನಲ್ಲಿ ಯಾವುದೇ ಘಟನೆಯಿಲ್ಲದೆ ರಷ್ಯಾದ ಉತ್ತರ ಸಮುದ್ರ ಮಾರ್ಗದ ಭಾಗಗಳನ್ನು ದಾಟಲು ಹಡಗುಗಳಿಗೆ ಅವಕಾಶ ಮಾಡಿಕೊಟ್ಟಿತ ಎಂದಿದೆ.
ಸಮುದ್ರದ ನೀರು ಮಂಜುಗಡ್ಡೆಯಾಗಿ ಪರಿವರ್ತಿತಗೊಂಡ ವಿಚಾರ ತಿಳಿಯದ ಸರಕು ಹಡಗುಗಳು ಚಲಿಸುತ್ತಿದ್ದ ಪ್ರದೇಶದಲ್ಲೇ ಸಿಲುಕಿಕೊಂಡಿವೆ. ಇಲ್ಲಿರುವ ಐಸ್’ಗಳನ್ನು ತೆರವುಗೊಳಿಸಿ ಹಡಗುಗಳು ಮುಂದೆಕ್ಕೆ ಚಲಿಸುವಂತೆ ಮಾಡಲು ಹಲವು ದಿನಗಳೇ ಬೇಕಾಗುತ್ತದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















