ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿರಿಯ ವೇದ ವಿದ್ವಾಂಸರು, ಆಧ್ಯಾತ್ಮಿಕ ಚಿಂತಕರು, ಲೇಖಕರು ಆದ ಕೆ.ಎಸ್.ನಾರಾಯಣಾಚಾರ್ಯ ಅವರು ನಮ್ಮೊಂದಿಗಿಲ್ಲ ಎನ್ನುವ ಮಾತು ಕೇಳಿ ಬಹಳ ದುಃಖವಾಯಿತು ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್. ದತ್ತಾತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ.

ದೇಶದ ಭವ್ಯ ಪರಂಪರೆಯನ್ನು ತಮ್ಮ ಕೃತಿಗಳು ಹಾಗೂ ಮಾತುಗಳಲ್ಲಿ ಹಿಡಿದಿಟ್ಟವರು, ಅದನ್ನು ಜನಮಾನಸಕ್ಕೆ ದಾಟಿಸುತ್ತ ಬಂದಿದ್ದವರು ನಾರಾಯಣಾಚಾರ್ಯರು. ಆಂಗ್ಲ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಡಾಕ್ಟರೇಟ್ ಮಾಡಿದ್ದ ನಾರಾಯಣಾಚಾರ್ಯರು ಇನ್ನೊಂದೆಡೆ ವೇದಾಧ್ಯಯನದಲ್ಲೂ, ವಿಶೇಷವಾಗಿ ಕೃಷ್ಣ ಯಜುರ್ವೇದದಲ್ಲಿ ಪಾರಂಗತರಾಗಿದ್ದರು ಎಂದು ತಿಳಿಸಿದ್ದಾರೆ.

ವೇದ ಸಂಸ್ಕೃತಿಯ ಪರಿಚಯ, ರಾಮಾಯಣ ಪಾತ್ರ ಪ್ರಪಂಚ, ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಮಹಾಭಾರತ ಕಾಲನಿರ್ಣಯ ಹೀಗೆ ಅವರ ಕೃತಿಗಳ ಹೆಸರೇ ಅವರು ಬಿಟ್ಟು ಹೋಗಿರುವ ಮಹಾಸಂಪತ್ತಿನ ಪರಿಚಯವನ್ನು ಕೊಡುವಂಥದ್ದಾಗಿದೆ. ಅವರ ಅಗಲಿಕೆ ದೇಶದ ಹಾಗೂ ರಾಜ್ಯದ ವಿದ್ವಾಂಸ ಪರಂಪರೆಗೆ ನಷ್ಟ ಉಂಟು ಮಾಡಿದೆ. ಹಿರಿಯರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















