ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಜನಪ್ರತಿನಿಧಿಗಳಾದವರು ಕೃಷಿಕರಾಗಿದ್ದರೆ ಆಗ ಅವರಿಗೆ ರೈತರ ಸಮಸ್ಯೆ ಅರಿವಿರುತ್ತದೆ. ರೈತ ಬೆಳೆದ ಬೆಳೆಗೆ ಶೇ.70ರಷ್ಟು ಬೆಂಬಲ ಬೆಲೆ ಸಿಗುತ್ತದೆ. ಅಧಿಕಾರ ವಿಕೇಂದ್ರಿಕರಣ ಸಮರ್ಪಕವಾಗಿ ಆಗಿ ರೈತರಿಗೆ ಅಧಿಕಾರ ಸಿಗಬೇಕು. ಇದರಿಂದ ಗ್ರಾಪಂಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿ ಉತ್ತಮ ಕೆಲಸ ನಿರೀಕ್ಷಿಸಬಹುದು ಎಂದು ಸಂಯುಕ್ತ ಜನತಾದಳದ ನಾಯಕ ಮಹಿಮಾ ಪಟೇಲ್ ಹೇಳಿದರು.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢರು ವ್ಯಾಪಾರಿ ಮನೋಭಾವದವರಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ. ಆಳಿತಾರೂಢರು ವ್ಯಾಪಾರಿ ಮನೋಭಾವದವರಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ. ನೋಟಿಗೆ ಓಟು ಮಾರಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಯೋಗ್ಯರಾದ ಜನಸಾಮಾನ್ಯರ ಕೆಲಸ ಮಾಡುವ ಇಚ್ಛಾಶಕ್ತಿಯುಳ್ಳ ಯೋಗ್ಯರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿದಾಗ ಆಡಳಿತದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದರು.
ಚುನಾವಣೆಗಳು ಸಹ ಸುಧಾರಣೆ ಆಗಬೇಕು. ಆಮಿಷಗಳನ್ನು ಒಡ್ಡದೆ ಎದುರಿಸುವ ಪ್ರಾಮಾಣಿಕ ಮನಸ್ಥಿತಿ ಬೆಳೆಸಿಕೊಂಡಾಗ ಪಾರದರ್ಶಕ ಆಡಳಿತ ನೀಡಲು ಸಾಧ್ಯ. ಕಲೆ, ಸಾಹಿತ್ಯ, ಸಂಸ್ಕೃತಿ, ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಇಂತಹ ಧ್ಯೇಯೋದ್ಧೇಶವನ್ನು ಹೊಂದಿರುವುದರಿಂದ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ನಮ್ಮ ಪಕ್ಷದ ವಿಧಾನಪರಿಷತ್ ಅಭ್ಯರ್ಥಿ ಶಶಿಕುಮಾರ್ ಅವರ ಪರವಾಗಿ ರೈತ ಸಂಘಗಳು ನಮ್ಮ ಬೆಂಬಲಕ್ಕೆ ನಿಂತಿವೆ ಎಂದರು.
ಸುದ್ಧಿಗೋಷ್ಠಿಯಲ್ಲಿ ದೇವರಾಜ್ ಸಿಂಧ್ಯಾ, ಲಕ್ಷ್ಮೀನಾರಾಯಣಗೌಡ, ರವಿಕೃಷ್ಣ ರೆಡ್ಡಿ, ಲಿಂಗೇಗೌಡ, ಮಂಜುನಾಥ ರೆಡ್ಡಿ, ಶಶಿಕುಮಾರ್ ಗೌಡ, ಧನಂಜಯ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post