ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, 15 ಮಂದಿ ನಿರ್ದೇಶಕರುಗಳಾಗಿ ಆಯ್ಕೆಗೊಂಡಿದ್ದಾರೆ.
ಶ್ರೀನಿವಾಸ್, ಬಿ.ಎಮ್. ಅಮೀರ್, ಎ.ಪಿ. ಕೆಂಪರಾಜು, ಡಿ. ಕೃಷ್ಣ, ಹೆಚ್. ಚಂದ್ರಶೇಖರ್, ಟಿ. ನಾಗರಾಜ, ಹೆಚ್.ಬಿ. ಶಿವಕುಮಾರ್, ಕೆ.ಎಸ್. ಬಸವರಾಜು, ಹೆಚ್.ಎ. ರವೀಶ್, ಆಲೇಶಪ್ಪ, ಎಮ್. ಸಿದ್ಧರಾಮ, ಪಿ. ಮಹೇಶ್, ಎನ್. ಅಬ್ಧುಲ್ ಅಲಿ, ಎನ್. ಸುಶೀಲ, ಹೆಚ್.ಎಸ್. ರೇಖಾ ಆಯ್ಕೆಗೊಂಡಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣಾ ಕಣದಲ್ಲಿ 24 ಮಂದಿ ನೌಕರರು ಸ್ಪರ್ಧಿಸಿದ್ದರು. ಇವರಲ್ಲಿ ಆರು ಮಂದಿ ಮಹಿಳೆಯರು ಸೇರಿದ್ದಾರೆ. ಮತ ಎಣಿಕೆ ಪ್ರಾರಂಭವಾಗಿದ್ದು, ರಾತ್ರಿ 8.30ರ ವೇಳೆಗೆ ಫಲಿತಾಂಶ ನೀಡಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯಿಂದ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ವಿ. ಲಕ್ಷ್ಮಿ ಮಾಹಿತಿ ನೀಡಿದ್ದರು.

ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ 15 ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆದಿದ್ದು ಶೇ. 98 ರಷ್ಟು ಮತಚಲಾವಣೆಯಾಗಿತ್ತು.

ಚುನಾಯಿತ 15 ಮಂದಿ ನಿರ್ದೇಶಕರಲ್ಲಿಯೇ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿಯ ಸ್ಥಾನಗಳಿಗೆ ಮುಂದಿನ ವಾರ ಆಯ್ಕೆ ನಡೆಯಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















