ಕಲ್ಪ ಮೀಡಿಯಾ ಹೌಸ್ | ಯುಎಇ |
ಮಹತ್ವದ ಬೆಳವಣಿಗೆಯೊಂದರಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್’ಗೆ ಸೇರಿದ ಎಲ್ಲ ಸರ್ಕಾರಿ ನೌಕರರಿಗೆ ವಾರಕ್ಕೆ ನಾಲ್ಕುವರೆ ದಿನ ಮಾತ್ರ ಕರ್ತವ್ಯದ ದಿನವೆಂದು ಘೋಷಿಸಿದ್ದು, ಇದು ಜನವರಿ 1ರಿಂದ ಜಾರಿಗೆ ಬರಲಿದೆ.
ಈ ಕುರಿತಂತೆ ಅಲ್ಲಿನ ಸರ್ಕಾರ ಮಾಹಿತಿ ಪ್ರಕಟಿಸಿದ್ದು, ವಾರಕ್ಕೆ ನಾಲ್ಕುವರೆ ದಿನ ಮಾತ್ರ ಕೆಲಸದ ದಿನವಾಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ಭಾನುವಾರದವರೆಗೂ ಎರಡೂವರೆ ದಿನ ರಜೆ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಯಾವುದಾದರೂ ನೌಕರರು ಇಷ್ಟಪಟ್ಟರೆ ಮಾತ್ರ ಶುಕ್ರವಾರ ಪೂರ್ತಿ ದಿನ ವರ್ಕ್ ಫ್ರಂ ಹೋಮ್ ಮಾಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post