ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಗುಂಡಶೆಟ್ಟಿಕೊಪ್ಪ ಗ್ರಾಮಸ್ಥರು ಮಾರಿ ಜಾತ್ರೆ ಆಚರಿಸುವ ಹಿನ್ನೆಲೆಯಲ್ಲಿ ಮೂಲ ದೇವಿಯಿರುವ ಯಲಸಿ ಗ್ರಾಮಕ್ಕೆ ಆಗಮಿಸಿ ಧಾರ್ಮಿಕ ವಿಧಿ ವಿಧಾನದ ಮೂಲಕ ತಮ್ಮ ಗ್ರಾಮಕ್ಕೆ ದೇವಿಯ ಆಶೀರ್ವಾದ ಪಡೆದು ತೆರಳಿದರು.

ಪೂರ್ವದಲ್ಲಿ ಗುಂಡಶೆಟ್ಟಿಕೊಪ್ಪ ಮತ್ತು ಯಲಸಿ ಗ್ರಾಮಸ್ಥರು ಒಟ್ಟಾಗಿ ಹಬ್ಬಾಚರಿಸುತ್ತಿದ್ದು ಈಚೆಗೆ ಪ್ರತ್ಯೇಕಗೊಂಡಿರುವ ಕಾರಣ ಮೂಲ ದೇವಿಯಿರುವ ಯಲಸಿ ಗ್ರಾಮದಲ್ಲಿ ಹರಕೆ ಕಟ್ಟಿಕೊಂಡು ಪಡ್ಲಿಗೆ ಸೇವೆ, ಶಾಸ್ತ್ರೋಕ್ತ ಪೂಜೆ, ದೀಪದ ಜೊತೆಗೆ ಇಡೀ ಗ್ರಾಮದವರು ಆಗಮಿಸಿ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಗ್ರಾಮದ ಮಾರಿ ಗದ್ದುಗೆಗೆ ತೆರಳಿ ದೇವಿಯನ್ನು ಸ್ಥಾಪಿಸಿಕೊಂಡರು.

ಇದೇ ಜನವರಿಯಲ್ಲಿ ಜಾತ್ರೆ ಆಚರಿಸಲಿದ್ದು ಜಾತ್ರೆಯ ಸುಗಮ ಆಚರಣೆಗಾಗಿ ಎಲ್ಲರೂ ಸಂಕಲ್ಪ ಮಾಡಿಕೊಂಡರು. ಸಂಕಲ್ಪ ಮತ್ತು ಹರಕೆಯ ವೇಳೆ ಯಲಸಿ ಗ್ರಾಮದ ಗ್ರಾಮಸಮಿತಿ, ಮುಜರಾಯಿ ಸಮಿತಿ, ಮಾರಿ ಜಾತ್ರಾ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದು ಪರಸ್ಪರ ಶುಭ ಹಾರೈಸಿದರು.


(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















