ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲೂಕಿನ ಕಸಬಾ ಹೋಬಳಿಯಲ್ಲಿ ಸುಮಾರು 3850 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಡಲೆ ಬೇಳೆಯನ್ನು ಭಿತ್ತನೆ ಮಾಡಲಾಗಿತ್ತು. ಸುಮಾರು 15 ದಿನಗಳ ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತು ಪೈರು ಸಂಪೂರ್ಣ ಕೊಳೆತು ಹೋಗಿದೆ. ಇದರಿಂದಾಗಿ 3315 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ನಷ್ಟವಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಜಿ.ಆಶೋಕ ತಿಳಿಸಿದ್ದಾರೆ.
ಬೆಳೆ ನಷ್ಟ ಹೊಂದಿದ ಜಮೀನುಗಳಿಗೆ ಇತ್ತಿಚಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಎನ್. ರಘುಮೂರ್ತಿ, ಕೃಷಿ ಉಪ ನಿರ್ದೇಶಕ ಪ್ರಭಾಕರ್ ಹಾಗೂ ಕೃಷಿ ಸಹಾಯಕ ನಿರ್ದೇಶಕ ಜಿ. ಅಶೋಕ್, ರಾಜಸ್ವ ನಿರೀಕ್ಷಕ ಲಿಂಗೇಗೌಡ, ಗ್ರಾಮಲೆಕ್ಕಿಗ ರಾಘವೇಂದ್ರ, ತಾಲೂಕಿನ ರಾಮಜೋಗಿಹಳ್ಳಿ ಹಾಗೂ ಬಾಲೆನಹಳ್ಳಿ ಗ್ರಾಮದ ನಷ್ಟ ಹೊಂದಿದ ಕಡಲೆಬೇಳೆಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಈ ಬಾರಿ ಅತಿವೃಷ್ಟಿಯಿಂದ ಬೆಳೆಯು ಸಂಪೂರ್ಣ ನಾಶವಾಗಿದೆ. ಬೆಳೆ ನಾಶವಾದ ಜಮೀನುಗಳಿಗೆ ಜಿಲ್ಲಾಧಿಕಾರಿಗಳು ಸಹ ಭೇಟಿ ನೀಡಿದರು. ಈ ಭಾಗದಲ್ಲಿ ಸತತ ಮಳೆಯಾಗಿರುವುದರಿಂದ ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ. ರೈತರು ಯಾವುದಕ್ಕೂ ಧೃತಿಗೆಡದೆ ಆತ್ಮಹತ್ಯೆ ದಾರಿ ಹಿಡಿಯಬಾರದು. ನಷ್ಟದ ವರದಿಯನ್ನು ನ್ಯಾಯವಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಬೆಳೆ ವಿಮೆ ಕಂಪನಿಗಳ ಜೊತೆ ಮಾತನಾಡಿ, ಬೆಳೆ ವಿಮೆ ಪಾವತಿಸಿದ ರೈತರಿಗೆ ಬೆಳೆ ವಿಮೆ ನೀಡುವಂತೆ ತಿಳಿಸಲಾಗುವುದು. ಕಳೆದ ಬಾರಿ ಕಡಲೆ ಬೆಳೆ ನಷ್ಟ ಹೊಂದಿದ ರೈತರಿಗೆ ಈಗಾಗಲೇ ಬೆಳೆವಿಮೆ ಪಾವತಿಸಲಾಗಿದೆ ಎಂದು ಕಂಪನಿ ಹೇಳಿದೆ. ರೈತರ ಖಾತೆಗೆ ಬೆಳೆ ವಿಮೆ ಬಂದಿರುವುದು ಖಾತರಿಯಾಗಿದೆ. ಈಗ ಬೆಳೆ ವಿಮೆ ಪಾವತಿ ಮಾಡಿದಂತಹ ಎಲ್ಲ ರೈತರಿಗೂ ಬೆಳೆ ವಿಮೆ ಸಿಗುವಂತೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಕೃಷಿ ಉಪನಿರ್ದೇಶಕ ಪ್ರಭಾಕರ್ ಮಾತನಾಡಿ, ಬೆಳೆ ವಿಮೆ ಪಾವತಿ ಮಾಡಿದಂತಹ ರೈತರು ಹಾಗೂ ಬೆಳೆ ನಷ್ಟ ಸಮೀಕ್ಷೆ ಮಾಡಲು ನಮ್ಮ ಇಲಾಖೆಯಿಂದ ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಲಾಗುತ್ತದೆ. ಅಲ್ಲಿಯವರೆಗೆ ರೈತರು ನಷ್ಟ ಹೊಂದಿದ ಬೆಳೆಯನ್ನು ನಾಶ ಪಡಿಸದೆ ಜಮೀನಿನಲ್ಲಿ ಇಡಬೇಕು. ಮತ್ತೆ ಬೇರೆ ಬೆಳೆ ಹಾಕುವುದು ಬೇಡ. ಬೆಳೆ ಸಮೀಕ್ಷೆ ಆದ ನಂತರ ಪರ್ಯಾಯ ಬೆಳೆಯನ್ನು ಬೆಳೆದುಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಮಜೋಗಿಹಳ್ಳಿ, ಬಾಲೆನಹಳ್ಳಿ ಗ್ರಾಮಸ್ಥರು, ಅಧಿಕಾರಿಗಳು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post