ನವದೆಹಲಿ, ಅ.18: ನ್ಯಾಯಾಧೀಕರಣ ತೀರ್ಪು ಸುಪ್ರೀಂ ವ್ಯಾಪ್ತಿಗೆ ಬರುವುದೋ ಇಲ್ಲವೋ ಎಂಬುದು ಇಂದು ತ್ರಿಸದಸ್ಯ ಪೀಠದಲ್ಲಿ ನಡೆದ ಪ್ರಮುಖ ಚರ್ಚೆಯಾಯಿತು.
ನ್ಯಾಯಾಧೀಕರಣ ಅಂತಿಮ ತೀರ್ಪು ಸುಪ್ರೀಂ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರದ ಪ್ರತಿನಿಧಿಯಾಗಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದವಾದರೆ, ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ನಾರಿಮನ್ ಬಲವಾಗಿ ಪ್ರತಿಪಾದಿಸಿದ್ದು ವಿಶೇಷವಾಗಿತ್ತು. ಈ ಎರಡೂ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾ.ಅಮಿತವ್ ರಾಯ್, ನ್ಯಾ.ಎ.ಎಂ. ಖಾನ್ವಿಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತು. ಈ ಮಧ್ಯೆ ಕೇರಳ ಕರ್ನಾಟಕದ ವಾದವನ್ನು ಬೆಂಬಲಿಸಿದರೆ, ತಮಿಳುನಾಡು ನೀರಿನ ಹಠವನ್ನು ಮುಂದುವರಿಸಿತು.
ಮುಂದಿನ ಆದೇಶದವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು. ಇದಕ್ಕೆ ಕರ್ನಾಟಕ ಸಮ್ಮತಿಸಿದೆ.
ಅಟಾರ್ನಿ ಜನರಲ್ ವಾದ:
ಸಂವಿಧಾನದ ಕಲಂ 262 ಆಧಾರದಲ್ಲಿ 136ರ ಪ್ರಕಾರ ಕಾವೇರಿ ಪ್ರಾಧಿಕಾರದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟಿಗೆ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಟ್ರಿಬ್ಯುನಲ್ ತೀರ್ಪು ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲವೆಂದು.
ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ರೋಹ್ಟಗಿ ವಾದ ಮಂಡಿಸಿದರು.
ನಾರಿಮನ್ ವಾದ:
ಸಂವಿಧಾನದ ಕಲಂ 136ರ ಪ್ರಕಾರ ಮೇಲ್ಮನವಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುತ್ತದೆ ಎಂದು ಕರ್ನಾಟಕ ಪರ ಸುಪ್ರೀಂ ಕೋರ್ಟ್ನಲ್ಲಿ ವಾದಿಸುತ್ತಿರುವ ಪಾಲಿ ನಾರಿಮನ್ ವಾದ.
ಪ್ರಮುಖಾಂಶಗಳು:
ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನೀರು ಹರಿಸಲು ಸುಪ್ರೀಂ ಆದೇಶ
ನಾಳೆಗೆ ವಿಚಾರಣೆ ಮುಂದೂಡಿಕೆ
ಕರ್ನಾಟಕದ ವಾದವನ್ನು ಬೆಂಬಲಿಸಿದ ಕೇರಳ
ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡುತ್ತೇವೆಂದ ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್
Discussion about this post