ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕಲ್ ಚಲನಚಿತ್ರದ ಪ್ರಚಾರಕ್ಕೆ ನಟ ಡಾಲಿ ಧನಂಜಯ ಅವರು ಇಂದು ನಗರಕ್ಕೆ ಆಗಮಿಸಿದ್ದರು.ನೇತ್ರಾವತಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅವರು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕಲ್ ಚಿತ್ರ ಇನ್ನೂ ಹೆಚ್ಚಿನ ಪ್ರದರ್ಶನಗೊಳ್ಳಲು ನೆರವಾಗುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ನಟ ಧನಂಜಯ ಮನವಿ ಮಾಡಿದರು.
ಧನಂಜಯ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದಕ್ಕೂ ಮೊದಲು ಚಿತ್ರಮಂದಿರದ ಮಾಲೀಕ ದುಷ್ಯಂತ್ ರಾಜ್ ಮತ್ತು ಸಿಬ್ಬಂದಿಗಳು ಧನಂಜಯ ಅವರನ್ನು ಪುಷ್ಪ ಮಾಲಿಕೆ ಮೂಲಕ ಸ್ವಾಗತಿಸಿದರು.ಮಾಜಿ ಶಾಸಕ ದಿ.ಅಪ್ಪಾಜಿ ನಿವಾಸಕ್ಕೆ ಭೇಟಿ
ನಟ ಧನಂಜಯ ಅವರು ಮಾಜಿ ಶಾಸಕ ದಿವಂಗತ ಶಾಸಕ ಎಂ.ಜೆ. ಅಪ್ಪಾಜಿ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳು ಜೆಡಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಪುತ್ರ ಎಂ.ಎ. ಅಜಿತ್ ಸೇರಿದಂತೆ ಕುಟುಂಬ ವರ್ಗದವರು ಧನಂಜಯ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post