ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ರೈತ ಬಾಂಧವರೇ, ಈ ಒಂದು ಆ್ಯಪ್ ನಿಮ್ಮ ಜೀವನವನ್ನೇ ಬದಲಿಸುಬಹುದು…! ಎಂಬ ಹಿಂದಿನ ಲೇಖನದಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಆರಂಭವಾಗಿದೆ ‘ಅಗ್ರಿ ಫೈ’ ಎಂಬ ಸ್ಟಾರ್ಟಪ್ ಕುರಿತಾಗಿ ತಿಳಿಸಿದ್ದೆವು. ಈ ಲೇಖನದಲ್ಲಿ ಕೃಷಿ ಖಾತಾ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನಿಮಗೆ ಅಗತ್ಯವಿರುವ ಸಾಲ ಸೌಲಭ್ಯವನ್ನು ಸರಳವಾಗಿ ಪಡೆಯುವ ಕುರಿತಾಗಿ ನೋಡೋಣ.ಅತ್ಯಾಧುನಿಕ ಯುಗದಲ್ಲಿ ಕೃಷಿಕರಿಗೆ ಅತಿ ಹೆಚ್ಚಿನ ಮಾರ್ಗದರ್ಶನ ಹಾಗೂ ಸಹಕಾರದ ಅಗತ್ಯವಿದೆ. ಹೀಗಾಗಿ, ಅನ್ನದಾತರಿಗೆ ನೆರವು ಒದಗಿಸುವ ಧ್ಯೇಯೋದ್ಧೇಶ ಹೊಂದಿರುವ ಅಗ್ರಿಫೈ ಸಂಸ್ಥೆ, ಇವರಿಗೆ ಸಾಲ ಸೌಲಭ್ಯವನ್ನು ಸರಳ ರೀತಿಯಲ್ಲಿ ಒದಗಿಸಲು ಮುಂದಾಗಿದೆ.
ಸಾಮಾನ್ಯವಾಗಿ ಮಾಸಿಕ ವೇತನ ಪಡೆಯುವ ನೌಕರರು ಹಾಗೂ ಉತ್ತಮ ವ್ಯವಹಾರ ಹೊಂದಿರುವ ವ್ಯಾಪಾರಸ್ಥರು ಬ್ಯಾಂಕ್ ಖಾತೆ ಮೂಲಕ ವ್ಯವಹಾರ ನಡೆಸಿ, ಸಿಬಿಲ್ ಸ್ಕೋರ್’ಗೆ ಅನುಗುಣವಾಗಿ ಸಾಲವನ್ನು ಪಡೆಯುತ್ತಾರೆ. ಆದರೆ, ಬಹಳಷ್ಟು ವ್ಯವಹಾರಸ್ಥರು ಇಂದಿಗೂ ಹಲವು ಕಾರಣಗಳಿಂದ ನಗದು ವ್ಯವಹಾರವನ್ನೇ ನಡೆಸುತ್ತಾರೆ. ಇವರುಗಳು ರೈತರಿಗೆ ನೀಡಿದ ಹಣವನ್ನು ಕೇವಲ ಒಂದು ಚೀಟಿ ಅಥವಾ ಲೆಡ್ಜರ್’ನಲ್ಲಿ ಬರೆಯುತ್ತಾರೆ. ಅಂತಹ ಸಂದರ್ಭದಲ್ಲಿ ಕೃಷಿಕರಿಗೆ ಬ್ಯಾಂಕ್’ಗಳಲ್ಲಿ ಸಾಲ ದೊರೆಯುವುದು ಕಷ್ಟವೇ ಆಗಿರುತ್ತದೆ. ಹೀಗಾಗಿ, ವ್ಯಾಪಾರಸ್ಥರನ್ನು ಡಿಜಟಲೀಕರಣ ಮಾಡುವ ಉದ್ದೇಶವೇ ಈ ಕೃಷಿ ಖಾತಾ ಆ್ಯಪ್.
ಕೃಷಿ ಖಾತಾ ಆ್ಯಪ್
ಯಾವುದೇ ಕೃಷಿಕರು ಗೂಗಲ್ ಪ್ಲೇಸ್ಟೋರ್ ಮೂಲಕ ಈ ಕೃಷಿ ಖಾತಾ ಆ್ಯಪನ್ನು ಡೌನ್’ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇದರಲ್ಲಿ ಕೇಳಲಾಗಿರುವ ವಿವರಗಳನ್ನು ಭರ್ತಿ ಮಾಡಬೇಕು. ಆನಂತರ ಅವರಿಗೆ ಅಗತ್ಯವಿರುವ ಸಾಲ ಸೌಲಭ್ಯಕ್ಕೆ ಮನವಿ ಸಲ್ಲಿಸಬೇಕು.
ವ್ಯಾಪಾರಸ್ಥರು ತಮ್ಮ ವ್ಯವಹಾರದ ಎಲ್ಲ ವಿವರಗಳನ್ನು ಕೃಷಿ ಖಾತಾದಲ್ಲಿ ದಾಖಲಿಸಬಹುದು. ಎಷ್ಟು ಜನ ರೈತರಿಗೆ ಸಾಲ ಒದಗಿಸಲಾಗಿದೆ. ಅವರ ವಿವರ, ಇದುವರೆಗೆ ನೀಡಿರುವ ಸಾಲದ ಮೊತ್ತ, ಬಡ್ಡಿ ಮುಂತಾದವುಗಳನ್ನು ದಾಖಲಿಸಬಹುದು.
ಕೃಷಿ ವ್ಯಾಪಾರಸ್ಥರು ಹೀಗೆ ಕೃಷಿ ಖಾತಾದಲ್ಲಿ ದಾಖಲಿಸಿರುವ ಅಂಕಿ ಅಂಶಗಳನ್ನು ಗಮನಿಸಿ ಅವರಿಗೆ ವಿಶೇಷ ಸ್ಕೋರ್ ಸಿದ್ಧಪಡಿಸಲಾಗುತ್ತದೆ. ಅವರ ವೈಯಕ್ತಿಕ ಸಿಬಿಲ್ ಮತ್ತು ಪ್ರತಿನಿತ್ಯದ ವಹಿವಾಟಿನ ಸ್ಕೋರ್ ಎರಡನ್ನೂ ಪರಿಗಣಿಸಿ ಅಗ್ರಿಫೈ ಸಂಸ್ಥೆಯು ವ್ಯಾಪಾರಸ್ಥರ ಪರವಾಗಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳ ಮುಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಸಾಲ ಒದಗಿಸಲು ಸಹಾಯ ಮಾಡುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post