ಕಲ್ಪ ಮೀಡಿಯಾ ಹೌಸ್ | ಮುಂಬೈ |
ಹಿರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಮಂಗಳವಾರ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಲತಾ ಮಂಗೇಶ್ಕರ್ ಅವರು ಹಿಂದಿ, ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳನ್ನು ಸೇರಿದಂತೆ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಚಲನಚಿತ್ರ ನಿರ್ಮಾಪಕ ದಿ.ಯಶ್ ಚೋಪ್ರಾ-ನಿರ್ದೇಶನದ 2004ರ “ವೀರ್ ಜಾರಾ” ಅವರ ಕೊನೆಯ ಪೂರ್ಣ ಚಲನಚಿತ್ರ ಗೀತೆಯಾಗಿದೆ.

ಮಂಗೇಶ್ಕರ್ ಅವರು ತಮ್ಮ ಕೊನೆಯ ಹಾಡನ್ನು 2021ರಲ್ಲಿ ರೆಕಾರ್ಡ್ ಮಾಡಿದ್ದು, “ಸೌಗಂಧ್ ಮುಜೆ ಈಸ್ ಮಿಟ್ಟಿ ಕಿ”, ಇದನ್ನು ಮಾರ್ಚ್ 30, 2021 ರಂದು ಭಾರತೀಯ ಸೇನೆಗೆ ಗೌರವವಾಗಿ ಬಿಡುಗಡೆ ಮಾಡಲಾಯಿತು. 2001ರಲ್ಲಿ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಸಹ ಪಡೆದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















