ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಾನಸಿಕ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದ್ದು,
ಯಡೇಹಳ್ಳಿ ಗ್ರಾಮದ ವಾಸಿ ವೀಣಾ (32) ಸಾವನ್ನಪ್ಪಿದ ಮಹಿಳೆ.
ಘಟನೆ ಹಿನ್ನೆಲೆ:
ಮೃತ ಮಹಿಳೆಯು ಅರಹತೋಳು ಗ್ರಾಮದ ಸಂತೋಷ್ ಮತ್ತು ಆತನ ಪತ್ನಿ ಆಶಾ ಅವರಿಗೆ 8 ಲಕ್ಷ ರೂ.ವನ್ನು ಸಾಲವಾಗಿ ನೀಡಿದ್ದರು. ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ವೀಣಾ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತೆಯ ಪತಿ ನೀಡಿದ ದೂರಿನ ಮೇರೆಗೆ ಆರೋಪಿ ಸಂತೋಷ್‌ನನ್ನು ಬಂಧಿಸಲಾಗಿದೆ.
ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿಯ ಹತ್ತಿರದ ಭದ್ರಾ ನಾಲೆಯಲ್ಲಿ ಮಹಿಳೆಯ ಶವ ದೊರೆತಿದ್ದು, ವೀಣಾ ಅವರ 7 ವರ್ಷದ ಮಗುವಿನ ಮೃತ ದೇಹವು ಚನ್ನಗಿರಿಯ ನಲ್ಲೂರು ಚಾನಲ್‌ನಲ್ಲಿ ದೊರೆತಿದೆ. ಮತ್ತೊಬ್ಬ ಮಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post