ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಿವಾದಿತ ಹೇಳಿಕೆಗಳಿಂದ ಸುದ್ದಿಯಾಗುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಹಿಂದುತ್ವವಾದಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

ಹೌದು… ಹಿಂದುತ್ವವಾದಿಗಳು ಹೇಡಿಗಳು ಸೈಬರ್ ಜಗತ್ತಿನಲ್ಲಿ ದ್ವೇಷವನ್ನು ಹರಡುವ ಕೆಲಸ ಮಾಡುತ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಹಿಂದು ವಿರೋಧ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ “ನೋ ಫಿಯರ್” (NoFear) ಎನ್ನುವ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ್ದಾರೆ.
हिंदुत्ववादी अपनी नफ़रत cyber दुनिया में फैलाते जा रहे हैं क्यूँकि कायर सिर्फ़ छुपकर वार करते हैं।
हिम्मत होती तो सामने आते।
इस नफ़रत का डटकर सामना करते रहना होगा- देश बचाना है!#NoFear
— Rahul Gandhi (@RahulGandhi) January 20, 2022
“ಹಿಂದುತ್ವವಾದಿಗಳು ಸೈಬರ್ ಜಗತ್ತಿನಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ, ಏಕೆಂದರೆ ಹೇಡಿಗಳು ಮಾತ್ರವೇ ಅಡಗಿಕೊಂಡು ದಾಳಿ ಮಾಡುತ್ತಾರೆ. ಇವರಲ್ಲಿ ಧೈರ್ಯವಾಗಿ ಸವಾಲನ್ನು ಎದುರಿಸುವ ಮನೋಭಾವವಿದ್ದರೆ ಮುಂದೆ ನಿಂತು ಮಾತನಾಡುತ್ತಿದ್ದರು. ಸೈಬರ್ ಜಗತ್ತಿನಲ್ಲಿ ಬರುತ್ತಿರುವ ಈ ದ್ವೇಷಗಳನ್ನು ನಿಭಾಯಿಸಲು ನಾವು ಮತ್ತಷ್ಟು ಗಟ್ಟಿಯಾಗಬೇಕು. ಆ ಮೂಲಕ ದೇಶವನ್ನು ಉಳಿಸಬೇಕು. ನೋ ಫಿಯರ್’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯು ‘ಹಿಂದುತ್ವ’ವನ್ನು ಬೋಧಿಸುತ್ತಿದೆ ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದ್ದು ಮಾತ್ರವಲ್ಲದೆ, ಹಿಂದೂ ಮತ್ತು ‘ಹಿಂದುತ್ವ-ವಾದಿ’ ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ಹಿಂದುತ್ವವನನು ಬೋಧನೆ ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಟೀಕೆ ಮಾಡಿದರು. ಫೇಸ್ ಬುಕ್, ಟ್ವಿಟರ್ ಹಾಗೂ ಇನ್ಸ್ ಟಾಗ್ರಾಮ್ ನಲ್ಲಿ ಇಂಥ ದ್ವೇಷಗಳನ್ನು ಹರಡುತ್ತಿರುವ ಹಿಂದುತ್ವವಾದಿ ವ್ಯಕ್ತಿಗಳನ್ನು ಹೇಡಿಗಳು ಎಂದು ಕರೆದಿರುವ ರಾಹುಲ್ ಗಾಂಧಿ, ಬಹಿರಂಗವಾಗಿ ಬರಲು ಇವರಿಗೆಲ್ಲ ಸಾಧ್ಯವಾಗುವುದಿಲ್ಲ, ಸೈಬರ್ ಜಗತ್ತಿನಲ್ಲಿ ನಿರ್ಮಾಣವಾಗುತ್ತಿರುವ ದ್ವೇಷದ ವಿರುದ್ಧ ತನ್ನ ಬೆಂಬಲಿಗರು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷವು ರಾಜಕೀಯ ಉದ್ದೇಶಕ್ಕಾಗಿ ಹಿಂದುತ್ವವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದು ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಹೇಳಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















