ಕಲ್ಪ ಮೀಡಿಯಾ ಹೌಸ್ | ಸಾಗರ/ಶಿವಮೊಗ್ಗ |
ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶವ ಶರಾವತಿ ಹಿನ್ನೀರಿನ ದಡದ ಸಮೀಪ ಪತ್ತೆಯಾಗಿದೆ.
ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದ ಅವರ ಕಾರು, ಮೊಬೈಲ್ ಹಾಗೂ ಚಪ್ಪಲಿ ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಗಳು ಹಾಗೂ ಪಟಗುಪ್ಪೆ ಸೇತುವೆ ಮೇಲೆ ಕಾರು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪ್ರಕಾಶ್‌ರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಅವರ ಶವ ಶರಾವತಿ ಹಿನ್ನೀರಿನ ದಡದ ಸಮೀಪ ಪತ್ತೆಯಾಗಿದೆ.
ಶವ ಪತ್ತೆಯಾದ ಬೆನ್ನಲ್ಲೆ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದು, ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
40 ಬಸ್‌ಗಳನ್ನು ಹೊಂದಿದ್ದ ಪ್ರಕಾಶ್ ಅವರು ವಾಹನಗಳ ಮೇಲೆ ಸಾಲ ಪಡೆದಿದ್ದರು. ಈ ಸಾಲ ಅವರನ್ನು ಸಾಕಷ್ಟು ಸಮಸ್ಯೆಗೆ ದೂಡಿತ್ತು ಎನ್ನಲಾಗುತ್ತಿದೆ.
ಇನ್ನೂ ಇದಕ್ಕೂ ಮೊದಲು ಐಟಿ ಸಮಸ್ಯೆಯನ್ನು ಎದುರಿಸಿದ್ದ ಪ್ರಕಾಶ್ ಬಳಿಕ ಕೊರೊನಾ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಇನ್ನಷ್ಟು ನಲುಗಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post