ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾ: ಉದ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 48 ಸಣ್ಣ-ದೊಡ್ಡ ಕೆರೆಗಳಿವೆ. ಅವುಗಳಲ್ಲಿ ಹಲವು ಕೆರೆಗಳು ಭಾಗಶಃ ಅತಿಕ್ರಮಣಕ್ಕೆ ಒಳಗಾಗಿವೆ. ಈ ಕೆರೆಗಳು ಕೃಷಿ, ತೋಟಗಾರಿಕೆಗೆ ಆಧಾರ ಜಲಮೂಲಗಳು ಇವು. ಕಾನು ಅರಣ್ಯಗಳು, ಕೆರೆಗಳ ಕಾರಣದಿಂದ ಇಲ್ಲಿಯ 11 ಗ್ರಾಮಗಳು ಸಮೃದ್ಧಿ ಕಂಡಿವೆ. ಇತ್ತೀಚಿಗೆ ಕೆರೆಗಳು ಹೂಳು ತೆಗೆಯುವ ಪುನಶ್ಚೇತನ ಮಾಡುವ ಕಾರ್ಯಗಳನ್ನು ಪಂಚಾಯ್ತಿ ಮಾಡುತ್ತಿದೆ. ಆದರೆ ಕೆರೆಗಳ ಅತಿಕ್ರಮಣದ ತೆರವು ಕಾರ್ಯನಡೆದಿಲ್ಲ, ಸರ್ವೆ ಆಗಿಲ್ಲ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇವೆ. ಸರ್ವೆ ಕಾರ್ಯ ಕೈಗೊಳ್ಳಲು ಕಂದಾಯ ಇಲಾಖೆ ಮುಂದಾಗಬೇಕು ಎಂದು ಉದ್ರಿ ಗ್ರಾಪಂ ಒತ್ತಾಯಿಸಿದೆ.

ಜ18ರಂದು ನಡೆದ ಜೀವ ವೈವಿಧ್ಯ ಅಭಿಯಾನ ಸಂದರ್ಭದಲ್ಲಿ ಬಿಳಾಗಿ ಕೆರೆಗೆ ಜೀವ ವೈವಿಧ್ಯ ತಾಣ ಎಂದು ಮಾನ್ಯತೆ ನೀಡುವ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷೆ ಮನಸ್ವಿನಿ ಕೆರೆಗಳ ಅತಿಕ್ರಮಣ ತೆರವುಗೊಳಿಸಿ ಸರ್ವೆ ನಡೆಸುವಂತೆ ಆಗ್ರಹ ಮಾಡಿದರು.
ಜೀವ ವೈವಿಧ್ಯ ಮಂಡಳಿಯ ನಿಕಟ ಪೂರ್ವಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಸರ್ಕಾರ ಕೆರೆ ಅತಿಕ್ರಮಣ ತರವುಗೊಳಿಸಲೇಬೇಕಾದ ಅನಿವಾರ್ಯತೆ ಇದೆ. ಸರ್ವೆ ಕಾರ್ಯಚುರುಕುಗೊಳ್ಳಬೇಕು. ಸೊರಬ ತಾ. ನಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳು ಇವೆ. ಜಿಲ್ಲಾ ತಾಲೂಕು ಆಡಳಿತ ಆದ್ಯತೆ ನಿಡಬೇಕು. ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಬಿಳಾಗಿ ಕೆರೆ (10 ಹೆಕ್ಟೇರ್ ಪ್ರದೇಶದಲ್ಲಿ) ಪಕ್ಷಿಗಳಿಗೆ ಜಲಚರಗಳು, ಅಪರೂಪದ ಜಲ ಸಸ್ಯಗಳಿಗೆ ಆಶ್ರಯ ಸ್ಥಾನ. ರೈತರ
ಬದುಕಿಗೆ ಅಕ್ಷಯ ಪಾತ್ರೆಯಾಗಿದೆ. ಇದಕ್ಕೆ ಪಂಚಾಯತ ಜೀವವೈವಿಧ್ಯ ಸಮಿತಿ ಮಾನ್ಯತೆ ನೀಡಿದ್ದು ಜಿಲ್ಲೆಗೆ ಮಾದರಿ ಆಗಿದೆ ಎಂದು ಅಶೀಸರ ಶ್ಲಾಘನೆ ಮಾಡಿದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















