ಕಲ್ಪ ಮೀಡಿಯಾ ಹೌಸ್ | ಕಲ್ಮನೆ / ಶಿಕಾರಿಪುರ |
ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ, ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ ಜನ್ಮದಿನ ಹಾಗೂ ರಾಷ್ಟ್ರೀಯ ಮಹಿಳಾ ದಿನದ ಶುಭ ಸಂದರ್ಭದಲ್ಲಿ ಮಹಿಳಾ ಸಹಕಾರ ಸಂಘದ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.
ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ಶ್ರೀ ಭಾಗ್ಯೋದಯ ಮಹಿಳಾ ಸಹಕಾರ ಸಂಘದ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಜನಾಪುರ ಜಲಾಶಯ ಒಡೆದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತಮ್ಮ ಸ್ವಂತ ಕಾರಿಗೆ ಮೈಕ್ ಸೆಟ್ ಕಟ್ಟಿ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಿದ್ದರು, ಇಂದು 360 ಕೋಟಿ ವೆಚ್ಚದಲ್ಲಿ ಒಂದುವರೆ ವರ್ಷದಲ್ಲಿ ನೀರನ್ನು ಹರಿಸುವ ಕೆಲಸ ಮುಗಿದಿದೆ. ದೇವರು ಮೆಚ್ಚುವಂತ ಕೆಲಸವನ್ನು ನಾವು ಮಾಡಿದ್ದೇವೆ, ನಿಮ್ಮ ಧ್ವನಿಯಾಗಿ ಸಂಸತ್ ನಲ್ಲಿ ಅರಣ್ಯ ಹಕ್ಕು ಪತ್ರವನ್ನು ಕೊಡಿಸುವ ಪ್ರಯತ್ನದಲ್ಲಿದ್ದೇನೆ, ಯಾವುದೇ ಕಾರಣಕ್ಕೂ ನಮ್ಮ ಜನರನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ, ನಾವು ಕೆಲಸವನ್ನು ಮಾಡಿ ಮಾತಾಡುವಂತಹ ಜನ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ವೀರೇಂದ್ರ ಪಾಟೀಲ್, ನಿಂಬೆಗುಂದಿ ಸಿದ್ದಲಿಂಗಪ್ಪ, ಅರುಂದತಿ, ಮಹಿಳಾ ಸಮಾಜದ ಅಧ್ಯಕ್ಷರಾದ ಶಾಂತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಮಲ್ಲೇಶ್ ಹಾಗೂ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post