ಕಲ್ಪ ಮೀಡಿಯಾ ಹೌಸ್ | ತಿರುಪತಿ |
ಚೆನ್ನೈನ ಮೃತ ಮಹಿಳೆಯೊಬ್ಬರಿಂದ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಬರೋಬ್ಬರಿ 9.2 ಕೋಟಿ ರೂ. ಬೃಹತ್ ಮೊತ್ತದ ದೇಣಿಗೆ ಸಂದಿದೆ.
ಈ ಕುರಿತಂತೆ ಟಿಟಿಡಿ ಬೋರ್ಡ್ ಚೇರ್ಮನ್ ವೈ.ವಿ. ಸುಬ್ಬಾರೆಡ್ಡಿ ಅವರ ಮಾಹಿತಿಯಂತೆ ಪಿಟಿಐ ವರದಿ ಮಾಡಿದೆ.
ಚೆನ್ನೈನ 79 ವರ್ಷದ ಅವಿವಾಹಿತ ವೃದ್ಧೆ, ವೆಂಕಟೇಶ್ವರನ ಭಕ್ತೆ ಪಾರ್ವತಮ್ಮ ಎನ್ನುವವರು ಇತ್ತೀಚೆಗೆ ವಿಧಿವಶರಾಗಿದ್ದರು. ಆರು ಕೋಟಿ ರೂ. ಬೆಲೆಬಾಳುವ ಸ್ಥಿರ ಆಸ್ತಿ ಹಾಗೂ 3.2 ಕೋಟಿ ರೂ. ಹಣವನ್ನು ಪಾರ್ವತಮ್ಮ ಅವರು ವೆಂಕಟೇಶ್ವರ ದೇವಾಲಯಕ್ಕೆ ದಾನ ನೀಡಲು ಇಚ್ಚಿಸಿದ್ದರು. ಇವರ ಆಸೆ ಹಾಗೂ ನಿರ್ಧಾರದಂತೆ ಈ ಸಂಬಂಧಿತ ದಾಖಲೆ ಪತ್ರಗಳು ಹಾಗೂ ಡಿಡಿಯನ್ನು ಪಾರ್ವತಮ್ಮ ಅವರ ಸಹೋದರಿ ಇಂದು ಸುಬ್ಬಾರೆಡ್ಡಿ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಟಿಟಿಡಿಯಿಂದ ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾರ್ಯಕ್ಕೆ ಈ ದೇಣಿಗೆ ಹಣವನ್ನು ಬಳಸಿಕೊಳ್ಳುವಂತೆ ಈ ದಾನಿಗಳು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















