ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಚೊರಟಿ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕಾಗಿ ದಾನಿಗಳಾದ ಶ್ರೀ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಅವರು ಎರಡು ಲಕ್ಷದ ನೂರಾ ಒಂದು ರೂಪಾಯಿಗಳನ್ನು ದಾನ ನೀಡುವ ಮೂಲಕ ಮಾದರಿ ಸೇವೆ ಮಾಡಿದ್ದಾರೆ.
ದೇವಾಲಯಕ್ಕೆ ಇಂದು ಭೇಟಿ ನೀಡಿದ ಪ್ರಸನ್ನಕುಮಾರ್ ಅವರು, ಟ್ರಸ್ಟ್’ನ ಸದಸ್ಯರಿಗೆ ಚೆಕ್ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಜೆ. ಶಿವಾನಂದಪ್ಪ, ಧರ್ಮಕ್ಕಾಗಿ ಉದಾರ ಮನಸ್ಸಿನಿಂದ ದಾನ ಮಾಡುವ ಮನಸ್ಸಿರುವ ಪ್ರಸನ್ನಕುಮಾರ್ ಅವರ ಸ್ವಭಾವ ಇತರರಿಗೆ ಮಾದರಿಯಾದುದು. ಇವರಿಗೆ ಭತವಂತ ಇನ್ನಷ್ಟು ಶಕ್ತಿ, ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀ ಚೊರಟಿ ಬಸವೇಶ್ವರ ದೇವಸ್ಥಾನ ಟ್ರಸ್ಟ್’ನ ಕೋಶಾಧ್ಯಕ್ಷರಾದ ಗಣಪತಿ ಓಟೂರು, ಪ್ರಧಾನ ಕಾರ್ಯದರ್ಶಿ ಮಹೇಶ್ ಸಿ ಖಾರ್ವಿ, ಸಹಕಾರ್ಯದರ್ಶಿ ಬಸವರಾಜ ಪಾಟೀಲ್, ನಿರ್ದೇಶಕರಾದ ಮಂಜು, ದೇವಸ್ಥಾನದ ಅರ್ಚಕರಾದ ಫಕ್ಕೀರ ಸ್ವಾಮಿಗಳು, ಆತ್ಮೀಯ ಮಿತ್ರರಾದ ಭೀಮೇಶ್ ಅವರುಗಳು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post