ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದ ಪುವರ್ ಸ್ಟಾರ್ ಪುನೀತ್ ರಾಜಕುಮಾರ್ Power star Puneeth Rajkumar ಅವರ ಜೇಮ್ಸ್ James ಚಿತ್ರ, ಕೇವಲ ಒಂದು ಸಿನಿಮಾವಾಗಿ ಉಳಿಯದೇ ವೈಭವದ ಹಬ್ಬದ ರೀತಿಯಲ್ಲಿ ರಾಜ್ಯದಾದ್ಯಂತ ಅಲೆ ಸೃಷ್ಠಿಸಿದೆ.
ಜೇಮ್ಸ್ ಅಲೆ ಈಗ ಅಮೆರಿಕಾಗೂ America ಸಹ ತಲುಪಿದ್ದು, ಅಲ್ಲಿನ ನೂರಾರು ಥಿಯೇಟರ್’ಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ದತೆ ನಡೆದಿದ್ದು, ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ.
ಅಮೆರಿಕಾದ ಅರ್ಕಾನ್ಸಾಸ್, ಅರಿಝೋನಾ, ಕ್ಯಾಲಿಫೋರ್ನಿಯಾ, ಕೊಲರಾಡೋ, ಕನೆಕ್ಟಿಕಟ್, ಫ್ಲೋರಿಡಾ, ಜಾರ್ಜಿಯಾ, ಇಲಿನಾಯ್ಸ್, ಇಂಡಿಯಾನಾ, ಕಾನ್ಸಾಸ್, ಮಸಾಚುಸೆಟ್ಸ್, ಮೇರಿಲ್ಯಾಂಡ್, ಮಿಚಿಗನ್, ಮಿನ್ನೇಸೋಟ, ಮಿಸೌರಿ, ಉತ್ತರ ಕೆರೊಲಿನಾ, ನೆಬ್ರಸ್ಕಾ, ನ್ಯೂ ಹ್ಯಾಂರ್ಪ್ಶೈ, ನ್ಯೂ ಜೆರ್ಸಿ, ನೆವಾಡಾ, ನ್ಯೂಯಾರ್ಕ್, ಓಹಿಯೋ, ಒಕ್ಲಹೋಮ, ಒರೆಗಾನ್, ಪೆನ್ಸಿಲ್ವೇನಿಯಾ, ರೋಡ್ ದ್ವೀಪ, ಟೆನೆಸ್ಸೀ, ಟೆಕ್ಸಾಸ್, ಉತಾಹ್, ವರ್ಜಿನಿಯಾ, ವಾಷಿಂಗ್ಟನ್ ಹಾಗೂ ವಿಸ್ಕಾನ್ಸಿನ್ ರಾಜ್ಯಗಳ ಸುಮಾರು ೭೫ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಜೇಮ್ಸ್ ಅಬ್ಬರಿಸಲು ಸಿದ್ದತೆ ನಡೆದಿದೆ.
Also read: Hijab is not essential religious practice of Islam: Says Karnataka HC
ಕಳೆದ ಅಕ್ಟೋಬರ್ 29ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದರು. ಅವರ ಅಭಿನಯದ ಜೇಮ್ಸ್ ಚಿತ್ರ ಈಗ ಅಂತಾರಾಷ್ಟೀಯ ಮಟ್ಟದಲ್ಲಿ ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಠಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post