ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ರಾಷ್ಟ್ರದ ಅಭಿವೃದ್ಧಿಯಲ್ಲಿ ರಾಜಕೀಯ ಚಿಂತಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಇವರ ಜೊತೆಗೆ ಆರ್ಥಿಕತಜ್ಞರು ಕೈಜೋಡಿಸಿದರೆ ಪ್ರಗತಿಯ ವೇಗ ವೃದ್ಧಿಯಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ Kuvempu University ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನ ಪೀಠ ಮತ್ತು ಬೆಂಗಳೂರಿನ ಇಂಡಿಯಾ ಸ್ಟಡಿ ಯುನಿಟ್ (ಐ.ಎಸ್.ಯು) ಸಂಯುಕ್ತಾಶ್ರಯದಲ್ಲಿ ಶನಿವಾರ ಬಸವ ಸಭಾಭವನದಲ್ಲಿ ‘ ‘ಪಂಚಾಯತ್ ರಾಜ್ ಮತ್ತು ಧರಮ್ ಪಾಲ್’ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮ ಪಂಚಾಯತಿಗಳು ಗುರುತರ ಜವಾವ್ದಾರಿ ನಿರ್ವಹಿಸುತ್ತವೆ. ಇದನ್ನೇ ಗಾಂಧೀಜಿ ಪ್ರತಿಪಾದಿಸಿದ್ದು. ಗಾಂಧೀಜಿ ನಂತರ ಗ್ರಾಮಸ್ವರಾಜ್ಯದ ಪರಿಕಲ್ಪನೆಯನ್ನು ಮುಂದುವರೆಸಿದ ಮಹಾನ್ ಚೇತನ ಧರಮ್ ಪಾಲ್ ಎಂದು ಬಣ್ಣಿಸಿದರು.
ಪ್ರೊ. ಜೆ. ಎಸ್. ಸದಾನಂದ ಮಾತನಾಡಿ, ಎಪ್ಪತ್ತರ ದಶಕದಲ್ಲಿ ಧರ್ಮಪಾಲ್ ಅವರು ಮದ್ರಾಸ್ ಪಂಚಾಯತ್ ವ್ಯವಸ್ಥೆ ಕುರಿತು ಅಧ್ಯಯನ ಪ್ರಕಟಿಸಿದ ನಂತರ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಹೊಸ ರೀತಿಯ ಚಿಂತನೆಗೆ ಶುರುವಾಗುತ್ತದೆ. ಇಂದು ವಿಶ್ವವಿದ್ಯಾಲಗಳಲ್ಲಿ ಪಂಚಾಯತ್ ರಾಜ್‍ಗೆ ಸಂಬಂಧಿಸಿದಂತೆ ಸಾಕಷ್ಟು ಮಹಾಪ್ರಬಂಧಗಳು ಹೊರಬರುತ್ತಿದ್ದರೂ, ಯಾವುದರಲ್ಲಿಯೂ ಪಂಚಾಯತ್ ರಾಜ್‍ನ ಸ್ವರೂಪ ಮತ್ತು ಸಮಸ್ಯೆಗಳ ಕುರಿತಾದ ಗಹನವಾದ ಚರ್ಚೆಗಳು ಕಾಣಸಿಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
Also read: PM Modi to visit State on April 5: CM Bommai
ವಿಭಾಗದ ಮುಖ್ಯಸ್ಥ ಪ್ರೊ. ಎ. ಷಣ್ಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಉದ್ದಗಟ್ಟಿ ವೆಂಕಟೇಶ್ ವಂದಿಸಿದರು. ಡಾ. ವಿನುತಾ ಎಸ್ ಪಾಟೀಲ್ ನಿರೂಪಿಸಿದರು. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post