ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ/ಬೆಂಗಳೂರು |
ಸೋಮವಾರದಿಂದ ರಾಜ್ಯದಲ್ಲಿ ಎಸ್’ಎಸ್’ಎಲ್’ಸಿ #SSLCExam ಪರೀಕ್ಷೆಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಈಗೋ ಬಿಟ್ಟು ಪರೀಕ್ಷೆ ಬರೆಯಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿವಿಮಾತು ಹೇಳಿದ್ದಾರೆ.
Also Read: ಜಿಮ್’ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ: ಕುಸಿದುಬಿದ್ದು ಸಾವನ್ನಪ್ಪಿದ ಬೆಂಗಳೂರು ಮಹಿಳೆ
ಈ ಕುರಿತಂತೆ ಮಾತನಾಡಿರುವ ಅವರು, ಅಹಂ ಬಿಟ್ಟು ಪರೀಕ್ಷೆಗೆ ಎಲ್ಲ ವಿದ್ಯಾರ್ಥಿಗಳು ಹಾಜರಾಗಬೇಕು. ಬಹುತೇಕ ವಿದ್ಯಾರ್ಥಿಗಳು ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಇದರ ಹೊರತಾಗಿ ಯಾವುದೇ ವಿದ್ಯಾರ್ಥಿಗಳು ಎಂತಹುದ್ದೇ ಕಾರಣಗಳಿಂದ ಪರೀಕ್ಷೆಗೆ ಹಾಜರಾಗದೇ ಇದ್ದರೆ ಅಂತಹವರಿಗೆ ಮತ್ತೆ ಅವಕಾಶ ನೀಡಲಾಗುವುದಿಲ್ಲ. ಸುಮಾರು ಒಂದು ತಿಂಗಳ ನಂತರ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವರ ಬರೆಯಬಹುದು ಎಂದಿದ್ದಾರೆ.


ರಾಜ್ಯದಲ್ಲಿ ಈ ಬಾರಿ 8.74 ಲಕ್ಷ ಮಕ್ಕಳು ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆಯಲಿದ್ದಾರೆ. 3,444 ಕೇಂದ್ರಗಳಲ್ಲಿ 48 ಸಾವಿರ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಸಲು ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಪ್ರತಿ ಬಾರಿಯಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 144 ಸೆಕ್ಷನ್ ಜಾರಿ ಇರಲಿದೆ ಎಂದು ತಿಳಿಸಿದರು.
Also Read: ಸ್ವಯಂ ಸೇವಾ ಸಂಸ್ಥೆಗಳು ಸತ್ಯದ ಹಾದಿಯಲ್ಲಿ ಜನರಿಗೆ ಒಳಿತು ಮಾಡಲಿ: ಬಿ.ಕೆ. ಶಿವರಾಮ್ ಸಲಹೆ
ಹಿಜಾಬ್ #Hijab ವಿಚಾರದಲ್ಲಿ ಹೈಕೋರ್ಟ್ #HighCourt ನೀಡಿರುವ ಆದೇಶವನ್ನು ಈಗಾಗಲೇ ಆಯಾ ಶಾಲೆಗಳ ಮುಖ್ಯಸ್ಥರು ಪಾಲಿಸುತ್ತಿದ್ದಾರೆ. ಶಾಲೆಯ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಿಬರಬಹುದು. ಆದರೆ ಕೊಠಡಿಯೊಳಗೆ ಧರಿಸಲು ಅವಕಾಶವಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post