ಕಲ್ಪ ಮೀಡಿಯಾ ಹೌಸ್ | ಉಡುಪಿ |
ಇಂದಿನಿಂದ ರಾಜ್ಯದಾದ್ಯಂತ ಪ್ರಥಮ ಪಿಯುಸಿ ಪರೀಕ್ಷೆಗಳು First PU Exam ಆರಂಭಗೊಂಡಿದ್ದು, ಹಿಜಾಬ್ ವಿವಾದಕ್ಕೆ Hijab row ಕಾರಣವಾಗಿದ್ದವರ ಪೈಕಿ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದಾರೆ.
ರಾಜ್ಯದಲ್ಲಿ ನಿನ್ನೆಯಿಂದ ಎಸ್’ಎಸ್’ಎಲ್’ಸಿ ಪರೀಕ್ಷೆ SSLC Exam ಆರಂಭಗೊಂಡಿದ್ದು, ಹೈಕೋರ್ಟ್ High Court ಆದೇಶದಂತೆ ಬಹಳಷ್ಟು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ, ಹಲವು ಕಡೆಗಳಲ್ಲಿ ಹಿಜಾಬ್’ಗಾಗಿ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ಬರೆಯದೇ ಮನೆಗೆ ಹಿಂತಿರುಗಿರುವ ಘಟನೆ ನಡೆದಿದೆ.
ಇದರ ಬೆನ್ನಲ್ಲೇ, ಇಂದಿನಿಂದ ಪ್ರಥಮ ಪಿಯುಸಿ ಪರೀಕ್ಷೆಗಳೂ ಸಹ ಆರಂಭವಾಗಿದೆ. ಹಿಜಾಬ್ ವಿಚಾರದ ವಿವಾದವನ್ನು ಸೃಷ್ಠಿಸಿದ ಉಡುಪಿ ಸರ್ಕಾರಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
Also read: ಭಾರತೀಪುರ ಕ್ರಾಸ್ ತಪ್ಪಿಸಲು ನಿರ್ಮಾಣವಾಗಲಿದೆ ಅತ್ಯಾಧುನಿಕ ಮೇಲ್ಸೇತುವೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post