ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಬರುವ ಏಪ್ರಿಲ್ 1ರಂದು ಕುವೆಂಪು ವಿಶ್ವವಿದ್ಯಾಲಯದ Kuvempu University ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಡಾ. ಶಾಂತಿನಾಥ ದೇಸಾಯಿ ದತ್ತಿನಿಧಿ ಉಪನ್ಯಾಸ ಆಯೋಜಿಸಲಾಗಿದ್ದು ರೇಮನ್ ಮಾಗ್ಸಸೆ ಪ್ರಶಸ್ತಿ ವಿಜೇತ ಅಭಿವೃದ್ಧಿ ಪತ್ರಕರ್ತ ಪಿ. ಸಾಯಿನಾಥ್ Journalist P. Sainath “200 ವರ್ಷಗಳ ಭಾರತೀಯ ಪತ್ರಿಕೋದ್ಯಮದ ಪ್ರಸಕ್ತ ಸ್ಥಿತಿಗತಿ”ಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಜ್ಞಾನಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಪಿ. ಸಾಯಿನಾಥ್ ಬಗ್ಗೆ: ‘ ದಿ ಹಿಂದೂ’ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದ ಪಿ. ಸಾಯಿನಾಥ್, “ಗ್ರಾಮೀಣ ಭಾರತದ ಬಡವರ ಬಗ್ಗೆ ಭಾರತದ ಅಂತಃಸಾಕ್ಷಿಯನ್ನು ಪ್ರಶ್ನಿಸುವಲ್ಲಿ ತೋರಿದ ಪತ್ರಿಕಾ ವೃತ್ತಿಪರತೆ”ಯನ್ನು ಪರಿಗಣ ಸಿ 2007ರಲ್ಲಿ ಏಷ್ಯಾದ ಪ್ರತಿಷ್ಠಿತ ರೇಮನ್ ಮ್ಯಾಗ್ಸಸೆ ಪ್ರಶಸ್ತಿ ನೀಡಲಾಗಿದೆ. ಸಾರ್ವಜನಿಕ ಕಲ್ಯಾಣದ ವರದಿಗಾರಿಕೆಗೆ ವಿಶ್ವ ಮಾಧ್ಯಮ ಸಮ್ಮೇಳನದ ಜಾಗತಿಕ ಪ್ರಶಸ್ತಿ, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆ, ಜಾಗತಿಕ ಮಾನವ ಹಕ್ಕುಗಳ ಪತ್ರಿಕೋದ್ಯಮಕ್ಕೆ ನೀಡುವ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1996ರಲ್ಲಿ ಪಿ. ಸಾಯಿನಾಥ್ ಪ್ರಕಟಿಸಿದ “ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್” (ಬರ ಎಂದರೆ ಎಲ್ಲರಿಗೂ ಇಷ್ಟ) ಪುಸ್ತಕ 43 ಮುದ್ರಣಗಳನ್ನು ಕಂಡಿದೆ.
Also read: ವಿದ್ಯಾರ್ಥಿಯ ಕೈಕಚ್ಚಿದ ಉಪನ್ಯಾಸಕ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post