ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಸಂಸ್ಕೃತಿಯನ್ನು ಸಾರಿ ಹೇಳುವ ಜನಪದ ಸಾಹಿತ್ಯದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕಿರಣ್ ರವೀಂದ್ರ ದೇಸಾಯಿ ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ Subbaiah Medical College ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಆನ್ಲೈನ್ ಜನಪದ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನಪದ ಎಂದರೆ ಜನರ ಬಾಯಿಂದ ಬಾಯಿಗೆ ಅಂದರೆ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದ ಪ್ರಕಾರವಾಗಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ನಂಬಿಕೆಗಳ ರೂಪವಾಗಿ ಜನಪದ ಜನಿಸಿದೆ. ಮೌಲ್ಯ ಹಾಗೂ ಆದರ್ಶವನ್ನು ಸಾರುವ ಜನಪದ ಸಾಹಿತ್ಯದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದಿದ್ದಾರೆ.
ನಮ್ಮ ಸಾಂಸ್ಕೃತಿಕ ಹಾಗೂ ಹಿಂದಿನ ಸಾಹಿತ್ಯಿಕ ಪ್ರಕಾರಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದಲೇ ಲಿಟರರಿ ಕ್ಲಬ್ ಆರಂಭಿಸಲಾಗಿದೆ. ಇಂದಿನ ಪೀಳಿಗೆಗೆ ತಿಳಿಯದೇ ಇರುವ ಸಾಹಿತ್ಯ ಪ್ರಕಾರಗಳನ್ನು ತಿಳಿಸುವ ಮೂಲಕ ಭವಿಷ್ಯವನ್ನು ಉತ್ತಮವಾಗಿಸುವುದು ಲಿಟರರಿ ಕ್ಲಬ್ ಉದ್ದೇಶಗಳಲ್ಲಿ ಒಂದಾಗಿದೆ.
-ಡಾ.ವಿನಯ ಶ್ರೀನಿವಾಸ್ಅಂದಿನ ಕಾಲಘಟ್ಟದಲ್ಲಿ ಜನರಿಗೆ ಪದವಿ ಇರಲಿಲ್ಲ. ಆದರೆ, ಇಂದಿನ ಕಾಲಕ್ಕಿಂತಲೂ ಅಂದಿನ ಕಲಾಪ್ರಕಾರಗಳಿಂದ ರೂಪಗೊಂಡಿದ್ದ ಜನರ ಬದುಕು ಉತ್ತಮವಾಗಿತ್ತು. ಮಾತ್ರವಲ್ಲ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುವುದಕ್ಕೂ ಆದರ್ಶಪ್ರಾಯವಾಗಿದ್ದು, ಸಮಾಜ ಇದಕ್ಕೆ ಪೂರಕವಾಗಿರಬೇಕು.
-ಕಿರಣ್ ರವೀಂದ್ರ ದೇಸಾಯಿ
ಸಮಾಜ ಸಮ್ಮತಿಸಿದ ಕಲಿಕೆಯಿಂದ ಬಂದ ನಡವಳಿಕೆಗಳೆಲ್ಲವೂ ಸಂಸ್ಕೃತಿಯ ಅಂಗವೆಂದು ಪರಿಗಣಿಸುವುದರಿಂದ ಜಾನಪದವು ಸಂಸ್ಕೃತಿಯ ಪ್ರಮುಖ ಅಂಗವೇ ಆಗಿದೆ. ಮಾನವ ತನ್ನ ಬಗೆಗೆ, ಮನುಕುಲದ ಬಗೆಗೆ, ಒಟ್ಟು ಸಮುದಾಯದ ಬಗೆಗೆ, ಸಮಷ್ಟಿ ಬದುಕಿನ ಬಗೆಗೆ, ಲೋಕದ ಬಗೆಗೆ ತಳೆದ ನಿಲುವುಗಳು, ಶೇಖರಗೊಂಡಿರುವ ಪರಂಪರಾಗತ ತಿಳಿವೇ ಜಾನಪದ. ಕೇಳಿದ್ದನ್ನು ನೆನಪಿನಲ್ಲಿಡುವುದು, ನೋಡಿದ್ದನ್ನು ಅನುಕರಣೆ ಮಾಡುವುದು, ಮೌಖಿಕ ಪರಂಪರೆಯಲ್ಲಿ ಅನೂಚಾನವಾಗಿ ಸಾಗಿಬರುವ ನಡವಳಿಕೆಗಳ ಒಟ್ಟು ಮೊತ್ತವೇ ಜಾನಪದ ಸಾಮಗ್ರಿ. ಮಾನವನ ಬದುಕಿನ ಸಮಸ್ತವೂ ಅದರಲ್ಲಿ ಸಮಾವೇಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಪ್ರಾಂಶುಪಾಲ ಡಾ.ಕೃಷ್ಣಪ್ರಸಾದ್ ಎಂ.ಎಸ್. ಮಾತನಾಡಿ, ಈಗಿನ ಯುವಪೀಳಿಗೆಯಲ್ಲಿ ಯುವ ವೈದ್ಯರಿಕೆ ತಾಳ್ಮೆಯ ಕೊರೆಯಿದೆ. ರೋಗಿಗಳೊಂದಿಗೆ ನಯವಿನಯದಿಂದ ವರ್ತಿಸಿ, ಅವರಿಗೆ ತಿಳಿಸಿಕೊಡುವ ವ್ಯವಧಾನ ಇಲ್ಲ. ಆಗಿನ ಜನಪದ ಸಂಸ್ಕೃತಿಯಲ್ಲಿ ಎಲ್ಲವನ್ನೂ ತಾಳ್ಮೆಯಿಂದ ವ್ಯವಹರಿಸುವ ಹಾಗೂ ವಿಚಾರ ವಿನಿಮಯದ ಪದ್ದತಿಯಿತ್ತು ಎಂದರು.
Also read: ಗಮನಿಸಿ! ಏ.9ರಂದು ಶಿವಮೊಗ್ಗದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ
ಅಂದಿನ ಇಂತಹ ಸಂಸ್ಕೃತಿ ಇಂದು ಇಲ್ಲ. ಹೀಗಾಗಿ, ಇಂದಿನ ಸಮಾಜದಲ್ಲಿ ಬಹಳಷ್ಟು ಸಮಸ್ಯೆಗಳು ಸೃಷ್ಠಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಂದಿನ ಸಂಸ್ಕೃತಿಯನ್ನು ತಿಳಿದುಕೊಂಡಾಗ ಬದುಕುವ ರೀತಿಯನ್ನು ಕಲಿಸುತ್ತದೆ. ಪದವಿ ಪಡೆಯುವುದರಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ಯಾವುದೇ ವೃತ್ತಿಯಲ್ಲಿದ್ದರೂ ಅಂದಿನ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ರೀತಿನೀತಿಗಳನ್ನು ಅಳವಡಿಸಿಕೊಳ್ಳಬಹುದು ಎಂದರು.
ಆನ್ಲೈನ್ ಜನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶರೀರ ಅಧ್ಯಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್.ಎ. ಚೇತನ್, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಂ.ಎಸ್. ಕೃಷ್ಣಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post