ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರದಲ್ಲಿ ಕೊರೋನಾ 4ನೆಯ ಅಲೆಯ Corona 4th Wave ಭೀತಿಯಿದ್ದರೂ ಯಾವುದೇ ಬದಲಾವಣೆ ಮಾಡದೇ ನಿಗದಿಂದ ಮೇ 16ರಿಂದ ಶಾಲೆಗಳು ಆರಂಭವಾಗಲಿವೆ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, Minister B C Nagesh ಕೊರೋನಾ ಕಾರಣದಿಂದ ಶಾಲೆಗಳನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಜೂನ್ ಜುಲೈನಲ್ಲಿ 4ನೆಯ ಅಲೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಮೇ 16ರಿಂದ ಶಾಲೆಗಳನ್ನು ಆರಂಭಿಸುವ ತೀರ್ಮಾನವನ್ನು ಈಗಾಗಲೇ ಮಾಡಿದ್ದೇವೆ. ಅದರಂತೆ ರಾಜ್ಯದಾದ್ಯಂತ 1 ರಿಂದ 10ನೇ ತರಗತಿಗಳು ಮೇ 16ರಿಂದ ಪ್ರಾರಂಭವಾಗಲಿವೆ ಎಂದರು.
Also read: ಭಾರತದ ಮಹಿಳಾ ಹಾಕಿ ತಂಡದ ನಾಯಕಿ ಬ್ರಿಟ್ಟೋ ನಿಧನ
ಕೋವಿಡ್’ಗೆ ಸಂಬಂಧಪಟ್ಟಂತೆ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಕೋವಿಡ್ ಕಾರ್ಯಪಡೆಯ ಸಲಹೆ-ಸೂಚನೆಗಳನ್ನು ಪಾಲಿಸಿ ಶಾಲೆಗಳನ್ನು ಆರಂಭಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post