ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೆಹಲಿಯಲ್ಲಿ ಏಪ್ರಿಲ್ 30ರಂದು ಮುಖ್ಯಮಂತ್ರಿಗಳು ಮತ್ತು ಎಲ್ಲಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನವಿದ್ದು, ಅದರಲ್ಲಿ ಭಾಗವಹಿಸಲು ನಾಳೆ ಸಂಜೆ ದೆಹಲಿಗೆ ತೆರಳುತ್ತಿದ್ದೇನೆ. ಹೈಕಮಾಂಡ್ ಭೇಟಿ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿದ್ದಾರೆ.
ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ಅಧಿಕಾರಿಗಳ ಸೇವಾ ಸಮಯ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ, ಬಡ್ತಿಯೆಲ್ಲಾ ನಿಗದಿತ ಆಡಳಿತಾತ್ಮಕ ವಿಧಾನಗಳಷ್ಟೆ.
ಸಿಐಡಿ ಎಡಿಜಿಪಿ ಅಮೃತ್ ಪೌಲ್ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಅವರ ವರ್ಗಾವಣೆ ಒಂದು ರೂಟೀನ್ ಪ್ರೊಸೆಸ್, ಬೇರೆ ಎಡಿಜಿಪಿಗಳ ವರ್ಗಾವಣೆ ಕೂಡ ಇತ್ತು. ಅದೊಂದು ಸಹಜ ಪ್ರಕ್ರಿಯೆ ಹಾಗೂ ಕೇವಲ ಆಡಳಿತಾತ್ಮಕ ಕ್ರಮಗಳಷ್ಟೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post