ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಟಿವಿ ಕೇಬಲ್’ನಲ್ಲಿ ಹರಿದ ವಿದ್ಯುತ್ ತಗುಲಿ ನಾಲ್ಕು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಹಿರಿಯೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಇಂಚರ ಎಂದು ಗುರುತಿಸಲಾಗಿದೆ.
ವಿದ್ಯುತ್ ತಂತಿಗೆ ಸಂಪರ್ಕಗೊಂಡಿದ್ದ ಟಿವಿ ಕೇಬಲ್ ಕತ್ತರಿಸಿಕೊಂಡು ಕೆಳಗೆ ತಂತಿ ಬೇಲಿ ಮೇಲೆ ಬಿದ್ದಿದೆ. ಈ ಕೇಬಲನ್ನು ಆಟವಾಡುವಾಗ ಬಾಲಕಿ ಮುಟ್ಟಿದ್ದು, ಇದರಿಂದಾಗಿ ವಿದ್ಯುತ್ ತಗುಲಿ ಮೃತಪಟ್ಟಿದೆ ಎನ್ನಲಾಗಿದೆ.
Also read: ಅಂತರಂಗದ ಅಭಿವ್ಯಕ್ತಿತನ ಕೌಶಲ್ಯಯುಕ್ತ ಬದುಕಿಗೆ ಪ್ರೇರಕ: ಶ್ರೀರಂಜಿನಿ ದತ್ತಾತ್ರಿ ಅಭಿಮತ
ವಿದ್ಯುತ್ ತಗುಲಿ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬಾಲಕಿ ಮೃತಪಟ್ಟಿದ್ದಾಳೆ. ಈಕೆ ಗ್ರಾಮದ ನಿವಾಸಿ ಸಂತೋಷ್ ಮತ್ತು ಪೂಜಾದಂಪತಿ ಪುತ್ರಿಯಾಗಿದ್ದಾಳೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post