ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೃತ್ಯ ಗುರು ಶ್ವೇತ ವೆಂಕಟೇಶ್ ಅವರ ಶಿಷ್ಯೆ ಕು. ಮೋನಿಷಾ ಐಸಿರಿ ಗೌಡ ಅವರ ಕಥಕ್ ರಂಗಮಂಚ ಪ್ರವೇಶ ಕಾರ್ಯಕ್ರಮ ಮೇ 3 ರಂದು ನಡೆಯಲಿದೆ.
ವೈಯಾಲಿಕಾವಲ್’ನ ಚೌಡಯ್ಯ ಮೆಮೋರಿಯಲ್ ಹಾಲ್’ನಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ Minister Ashwathnarayan ಹಾಗೂ ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಹಾಗು ನಂದಿನಿ ಕೆ ಮೆಹ್ತ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಕಾರ್ಯಕ್ರಮವನ್ನು ಆಯೋಜಿಸಿದೆ.
ಶ್ರೀದೇವಿ ಜಗದೀಶ ಹಾಗೂ ವೈ.ಎಂ. ಜಗದೀಶ ಅವರ ಪುತ್ರಿ ಮೋನಿಷಾ ಐಸಿರಿ ಗೌಡ ಅವರು, ಬಾಲ್ಯದಿಂದಲೇ ನೃತ್ಯಾಭಾಸ ಆರಂಭಿಸಿದ ಕು. ಮೋನಿಷಾ ಕಥಕ ನೃತ್ಯ ಪ್ರಕಾರದಲ್ಲಿ ಡಾ.ಮಾಯಾರಾವ್ ರವರ ಬಳಿ ಪ್ರಾರಂಭಿಕ ಅಭ್ಯಸಿಸಿದ್ದಾರೆ. ಭರತನಾಟ್ಯದಲ್ಲಿ ಡಾ.ಸುಪರ್ಣ ವೆಂಕಟೇಶ್ ರವರಿಂದ ಕಲಿತು ಇದೀಗ ಗುರು ಶ್ವೇತ ವೆಂಕಟೇಶ ರವರಲ್ಲಿ ಕಥಕ್ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.
Also read: ವಿಐಎಸ್’ಎಲ್ ಅಧಿಕಾರಿ ನಿತಿನ್ ಜೋಸ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post