ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಶೃಂಗೇರಿ ಶಂಕರ ಮಠದಲ್ಲಿ ಮೇ 6ರವರೆಗೆ ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಮೇ 5ರ ಗುರುವಾರದವರೆಗೆ ಪ್ರತಿನಿತ್ಯ ಬೆಳಿಗ್ಗೆ 10ಗಂಟೆಯಿಂದ 12ರವರೆಗೆ ಶ್ರೀ ಶಾರದ ಶಂಕರ ಭಕ್ತ ಮಂಡಳಿ, ಇವರಿಂದ ಸೌಂದರ್ಯಲಹರಿ, ಶಿವಸಹಸ್ರನಾಮ, ಲಲಿತ ಸಹಸ್ರನಾಮ, ವಿಷ್ಣುಸಹಸ್ರನಾಮ, ಸ್ತ್ರೋತ್ರಗಳು ಹಾಗೂ ಭಜನೆ ನಡೆಯಲಿದೆ.

6ರ ಶುಕ್ರವಾರ ಬೆಳಿಗ್ಗೆ 8:30ರಿಂದ ದೇವತಾ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹ, ರುದ್ರಹೋಮ ಬೆಳಿಗ್ಗೆ 10ರಿಂದ ತಿಮ್ಲಾಪುರ ಶ್ರೀ ವೆಂಕಟೇಶ್ವರ ಭಜನಾ ಮಂಡಳಿ ಅವರಿಂದ ಭಜನೆ ಕಾರ್ಯಕ್ರಮ ನಂತರ ರುದ್ರಹೋಮದ ಪೂರ್ಣಾಹುತಿ, ಅನ್ನಪೂಣೇಶ್ವರಿ ಪೂಜೆ, ಗೋಪೂಜೆ, ಅಷ್ಠಾವದಾನ ಸೇವೆ ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಮಹಾ ಪ್ರಸಾದ ವಿನಿಯೋಗ ಆಯೋಜಿಸಲಾಗಿದೆ.
Also read: ಭದ್ರಾವತಿ: ತವರಿಗೆ ಮರಳಿದ ವೀರ ಯೋಧ ಮಂಜುನಾಥ್‌ಗೆ ಅದ್ಧೂರಿ ಸ್ವಾಗತ
ಸಂಜೆ 6 ಗಂಟೆಗೆ ಭಕ್ತರಿಂದ ಶ್ರೀ ಶಂಕರ ಭಗವತ್ಪಾದಾಚಾರ್ಯರ ಪಲ್ಲಕ್ಕಿ ಉತ್ಸವ, ಭಜನೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















