ಕಲ್ಪ ಮೀಡಿಯಾ ಹೌಸ್ | ಉಡುಪಿ |
ದಕ್ಷಿಣಭಾರತದ ಪ್ರಖ್ಯಾತ ದೇವಾಲಯ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಹುಂಡಿ ಹಣ ಏಣಿಕೆ ಕಾರ್ಯ ನಡೆದಿದ್ದು, ದಾಖಲೆಯ 1.53 ಕೋಟಿ ಹಣ ಸಂಗ್ರಹವಾಗಿದೆ.
ಕೋವಿಡ್ ನಿರ್ಬಂಧಗಳ ಸಡಿಲಿಕೆ ಬಳಿಕ ದೇವಾಲಯಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದಾರೆ. ಈ ಹಿನ್ನಲೆ ದೇವಳದ ಆದಾಯದಲ್ಲೂ ಏರಿಕೆಯಾಗಿದೆ.
ಪ್ರಸ್ತುತ ಹುಂಡಿಯಲ್ಲಿ 1,53,41,923 ರೂ ನಗದು 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದೇ ಮೊದಲಬಾರಿ 1.53 ಕೋಟಿ ನಗದು ಸಂಗ್ರಹವಾಗಿದೆ.
Also read: ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post