ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಂಗಾಮುವಾರು ಬೆಳೆ ವಿಮೆ Crop Insurance ಶೀಘ್ರ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರ Minister B C Patil ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಇ-ಆಡಳಿತ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖಾಧಿಕಾರಿಗಳೊಂದಿಗೆ ತಾಂತ್ರಿಕ ದೋಷಗಳು ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು.
ಬೆಳೆ ವಿಮೆಗೆ ಅನುಕೂಲ ಕಲ್ಪಿಸುವ ನನ್ನ ಬೆಳೆ ನನ್ನ ಹಕ್ಕು ಬೆಳೆ ಸಮೀಕ್ಷೆ ಯೋಜನೆಗೆ ರೈತರು ಹೆಚ್ಚು ಒತ್ತು ನೀಡಿ ರೈತರೇ ಸ್ವತಃ ಮೊಬೈಲ್ ಬೆಳೆ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡುವಂತೆ ನೋಡಿಕೊಳ್ಳಬೇಕು. ಬೆಳೆ ಸಮೀಕ್ಷೆ ಹಂಗಾಮುವಾರು ಸರಿಯಾಗಿ ಅಪ್ಲೋಡ್ ಆಗಬೇಕು
ಬೆಳೆ ಕಟಾವು ಪ್ರಯೋಗಗಳ ದತ್ತಾಂಶ ಹಾಗೂ ಬೆಳೆ ಸಮಿಕ್ಷೆ ದತ್ತಾಂಶವನ್ನು ಅಧಿಕಾರಿಗಳು ತಾಳೆ ಮಾಡಿ ಅಪ್ಲೋಡ್ ಮಾಡಿ ಬೆಳೆ ವಿಮೆಯನ್ನು ಘಟಕವಾರು ಇತ್ಯರ್ಥಪಡಿಸಿಸಬೇಕೆಂದು ತೀರ್ಮಾನಿಸಲಾಯಿತು.ಇದನ್ನು 2022 ರ ಬೆಳೆವಿಮೆಯನ್ನು 2022 ರ ನವೆಂಬರೊಳಗೆ ಇತ್ಯರ್ಥಪಡಿಸಬೇಕು. ಆದ ಬಳಿಕ ರೈತರ ಪಹಣಿಯಲ್ಲಿ ತಕ್ಷಣವೇ ತರಲು ಸೂಚಿಸಲಾಯಿತು.
ಸಭೆಯಲ್ಲಿ ಇ-ಆಡಳಿತ ಪ್ರಧಾನ ಕಾರ್ಯದರ್ಶಿ ಪೊನ್ನುರಾಜ್, ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್,ಕೃಷಿ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ, ಇ-ಆಡಳಿತ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post