ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿವಿ ರಾಜ್ಯದ ಪ್ರಥಮ ತಂಬಾಕು ಮುಕ್ತ ವಿಶ್ವವಿದ್ಯಾಲಯವಾಗಿರುವುದು ನಮ್ಮ ಜಿಲ್ಲೆಗೆ ಮತ್ತು ನಮಗೆಲ್ಲರಿಗೂ ಹೆಮ್ಮೆಯ ವಿಚಾರವೆಂದು ರಾಷ್ಟ್ರೀಯ ತಂಬಾಕು ನಿಯಂತ್ರಣದ ಶಿವಮೊಗ್ಗ ಜಿಲ್ಲಾ ಸಲಹೆಗಾರರಾದ ಹೇಮಂತ್‌ರಾಜ್ ಅರಸ್ ಹರ್ಷ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯವನ್ನು Kuvempu University ತಂಬಾಕು ಮುಕ್ತ ವಿಶ್ವವಿದ್ಯಾಲಯವೆಂದು ರಾಷ್ಟ್ರೀಯ ತಂಬಾಕು ನಿಯಂತ್ರಣದ ಶಿವಮೊಗ್ಗ ಜಿಲ್ಲಾ ಸಲಹೆಗಾರರಾದ ಹೇಮಂತ್‌ರಾಜ್ ಅರಸ್ ಸಮ್ಮುಖದಲ್ಲಿ ಇಂದು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ 300 ಅಡಿ ವ್ಯಾಪ್ತಿ ಪ್ರದೇಶವನ್ನು ತಂಬಾಕು ಮುಕ್ತ ಪ್ರದೇಶವೆಂದು ಪರಿಗಣಿಸಿ ಈ ಪ್ರಮಾಣಪತ್ರವನ್ನು ಘೋಷಿಸಲಾಗಿದೆ. ಇದರ ಪೂರ್ವ ಸಿದ್ದತೆಗಾಗಿ ಕಳೆದ ತಿಂಗಳು ಏಪ್ರಿಲ್ 27ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ, ಅರಿವು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿ ನಂತರ ಸ್ಥಳಿಯವಾಗಿ ಈ ವ್ಯಾಪ್ತಿಯ ತಂಬಾಕು ಪದಾರ್ಥಗಳ ಮಾರಾಟಗಾಗರಿಗೆ ತಿಳುವಳಿಕೆ ನೀಡಲಾಗಿ, 10 ಪ್ರಕರಣಗಳನ್ನು ದಾಖಲಿಸಿ 1500 ರೂಗಳನ್ನು ದಂಡ ವಿಧಿಸಲಾಗಿದೆ ಎಂದರು.
ಬೀಡಿ, ಸಿಗರೇಟ್ ತಯಾರಿಕೆಗೆ ಲಕ್ಷಾಂತರ ಮರಗಳನ್ನು ನಾಶ ಮಾಡಲಾಗುತ್ತಿದೆ. ಆದ್ದರಿಂದ ಮೇ, 31, 2022ರಂದು ತಂಬಾಕು ರಹಿತ ದಿನವನ್ನ, ತಂಬಾಕು ಪರಿಸರಕ್ಕೆ ಮಾರಕ ದಿನವನ್ನಾಗಿ ಆಚರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರವ ಮೇರೆಗೆ ಈ ದಿನವನ್ನು ಗಿಡಗಳನ್ನು ನೆಡುವುದರ ಮೂಲಕ ಮತ್ತು ಸ್ಥಳಿಯವಾಗಿ ಜನರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಆಚರಿಸಬೇಕು ಎಂದರು.
Also read: ಬೆಂಗಳೂರಿಗರ ನಿದ್ದೆಗೆಡಿಸಿದ ಮಳೆ: ಯಾವ ಬಡಾವಣೆಗಳು ಬಹುತೇಕ ಜಲಾವೃತಗೊಂಡಿದ್ದವು? ಇಲ್ಲಿದೆ ಮಾಹಿತಿ
ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ ಕುವೆಂಪು ವಿಶ್ವವಿದ್ಯಾಲಯ ರಾಜ್ಯದಲ್ಲೆ ಪ್ರಥಮ ತಂಬಾಕು ಮುಕ್ತ ವಿಶ್ವವಿದ್ಯಾಲಯ ವಾಗಿರುವುದು ನಮಗೆಲ್ಲ ಸಂತೋಷದ ವಿಷಯ ಎಂದರು.
ಇಂದಿನ ಯುವ ಸಮುದಾಯ ತಂಬಾಕು ಮತ್ತು ಮದ್ಯಾಪಾನದಂತಹ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಅಂತಕಕಾರಿಯಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಂತಹ ದುಷ್ಚಟಗಳನ್ನು ದೂರವಿಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗು ಸಹ ಈ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗುವುದು ಹಾಗೂ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ತಂಬಾಕು ವ್ಯಸನಿಗಳಿಗೆ ಪ್ರತ್ಯೇಕ ಕೊಠಡಿ ತೆರೆದು ವ್ಯಸನ ಮುಕ್ತರಾಗುವ ಚಿಕಿತ್ಸೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್, ಹಣಕಾಸು ಅಧಿಕಾರಿ ರಾಮಕೃಷ್ಣ, ಪ್ರೊ.ಹೆಚ್.ಎಸ್.ಭೋಜ್ಯನಾಯ್ಕ್, ಪ್ರೊ.ಬಿ.ಈ.ಕುಮಾರಸ್ವಾಮಿ, ಉಪಕುಲಸಚಿವ ಡಾ.ಪಾಲಾಕ್ಷನಾಯ್ಕ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post