ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ನೀರು ತುಂಬಿ ತುಳುಕುತ್ತಿದ್ದ ಜಲಾಶಯದ ಗೋಡೆಯನ್ನು ಏರುವ ಹುಚ್ಚು ಸಾಹಸಕ್ಕೆ ಪ್ರಯತ್ನಿಸಿದ ಯುವಕನೊಬ್ಬ ಕೆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಈ ಜಲಾಶಯ ತುಂಬಿ ತುಳುಕುತ್ತಿದೆ. ಹೀಗಾಗಿ, ಪ್ರವಾಸಿಗರ ಸಂಖ್ಯೆಯೂ ಸಹ ಹರಿದು ಬರುತ್ತಿದೆ. ಹೀಗೆ ಇಲ್ಲಿಗೆ ಸ್ನೇಹಿತರ ಜೊತೆ ಆಗಮಿಸಿದ ಯುವಕನೊಬ್ಬ ಜಲಾಶಯದ ಗೋಡೆ ಏರಲು ಯತ್ನಿಸಿದ್ದಾನೆ. ಆದರೆ, ಗೋಡೆ ಮೇಲಿಂದ ಜಾರಿದ ಆತ ಕೆಳಕ್ಕೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
Also read: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಸಿಎಂ ಬೊಮ್ಮಾಯಿ
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post