ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ APJ Abdul Kalam ಅವರು ಹೇಳಿದಂತೆ ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ದ ಗಂಗೆಯು ದೇಶದ ಆಸ್ತಿ ಎಂದು ಸಂಸದ ಬಿ. ವೈ. ರಾಘವೇಂದ್ರ MP Raghavendra ತಿಳಿಸಿದರು.
ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರೀಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ವಿಗ್ರಹದ ಅನಾವರಣ ಹಾಗೂ ಶ್ರೀ ಡಾ. ಶಿವಕುಮಾರಸ್ವಾಮೀಜಿಯವರ 115ನೇ ಜಯಂತ್ಯೋತ್ಸವವ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಶಿವಕುಮಾರ ಸ್ವಾಮೀಜಿಗಳ Shri Shivakumara Swamiji ಹೆಸರೇ ನಮ್ಮಲ್ಲಿ ಒಂದು ವಿಶಿಷ್ಟ ಭಕ್ತಿಯ ಭಾವನೆಯನ್ನು ಅರಳಿಸುತ್ತದೆ. ಭಕ್ತಿ, ಸೇವೆ, ನಾನಾ ಪ್ರಕಾರಗಳ ದಾಸೋಹದ ಮೂಲಕ ನಮ್ಮ ಬದುಕನ್ನು ಪರಿಪೂರ್ಣವಾಗಿಸಲು, ಸಾರ್ಥಕಗೊಳಿಸಿಕೊಳ್ಳಲು ಅದು ಪ್ರೇರೇಪಿಸುತ್ತದೆ. ಇಂತಹ ಪೂಜ್ಯರ ಜೊತೆಗಿನ ಒಡನಾಟದ ನೆನಪೇ ಸಾಕು, ನಾವೆಷ್ಟು ಅದೃಷ್ಟಶಾಲಿಗಳು ಎಂದು ಹೇಳಿದರು.
Also read: ನಿವೃತ್ತ ಶಿಕ್ಷಕಿ ಫಲ್ಗೂಬಾಯಿ ನಿಧನ
ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ಕಾರಣಕ್ಕೆ ಉದ್ಯೋಗ ಕಳೆದುಕೊಂಡು, ಜನ ಸಾಮಾನ್ಯರು ಹಸಿವೆಯಿಂದ ಬಳಲುವ ಭೀತಿ ಎದುರಾದಾಗ, ಕೇಂದ್ರ ಹಾಗು ರಾಜ್ಯ ಸರಕಾರಗಳು ಬಡವರಿಗೆ ಉಚಿತ ಅಕ್ಕಿ, ಹಾಗು ಇತರ ಧವಸ -ಧಾನ್ಯ ಹಂಚಿಕೆ ಕಾರ್ಯ ಆರಂಭಿಸಿತು. ಈ ನಿರ್ಧಾರದ ಹಿಂದಿನ ಪ್ರೇರಣೆ, ಸಿದ್ದಗಂಗಾ ಮಠದ ದಾಸೋಹದ ಕಲ್ಪನೆಯಾಗಿತ್ತು. ಇಲ್ಲಿ ಹಸಿವೆಗೆ ಜಾಗವಿಲ್ಲ. ಇಂತಹ ಒಂದು ಆದರ್ಶವನ್ನು ಸರಕಾರವೇ ಅನುಸರಿಸುತ್ತದೆ ಎಂಬುದು ಈ ಮಠದ ಹೆಗ್ಗಳಿಕೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ನಾಡೋಜ ಗೋ.ರು. ಚೆನ್ನಬಸಪ್ಪ, ಶಾಸಕ ಸಂಗಮೇಶ್ವರ, ಭದ್ರಾವತಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ತೀರ್ಥಯ್ಯ, ಭದ್ರಾವತಿ ನಗರಸಭಾ ಅಧ್ಯಕ್ಷರು ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post