ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್’ಎಲ್ VISL ನಿವೃತ್ತ ಕಾರ್ಮಿಕರಿಗಾಗಿ ಎಸ್’ಎಐಎಲ್ ವತಿಯಿಂದ ಭದ್ರಾ ನರ್ಸಿಂಗ್ ಹೋಂನಲ್ಲಿ ಕ್ಯಾಶ್’ಲೆಸ್ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ.
ಈ ಕುರಿತಂತೆ ನಿವೃತ್ತ ಕಾರ್ಮಿಕರ ಸಂಘದಲ್ಲಿ ಎಂಡಿ ಇಂಡಿಯಾ ಟಿಪಿಎ ಇನ್ಷೂರೆನ್ಸ್ ಕಂಪೆನಿಯೊಂದಿಗೆ ಸಭೆ ನಡೆಸಲಾಗಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಭದ್ರಾ ನರ್ಸಿಂಗ್ ವೈದ್ಯ ಡಾ. ನರೇಂದ್ರ ಅವರು ಸಹ ಪಾಲ್ಗೊಂಡಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ವಿಐಎಸ್’ಎಲ್ ನಿವೃತ್ತ ನೌಕರರಿಗೆ ಭದ್ರಾ ನರ್ಸಿಂಗ್ ಹೋಂನಲ್ಲಿ ಕ್ಯಾಶ್’ಲೆಸ್ ಚಿಕಿತ್ಸೆ ಹಾಗೂ ಹೊರ ರೋಗಿ ಚಿಕಿತ್ಸಾ ಸೌಲಭ್ಯ ಒದಗಿಸುವ ಕುರಿತಾಗಿ ತೀರ್ಮಾನಿಸಲಾಗಿದೆ. ಅಲ್ಲದೇ, ಹೆಚ್ಚಿನ ಚಿಕಿತ್ಸೆ ಅಗತ್ಯ ಎದುರಾದರೆ ಶಿವಮೊಗ್ಗದ ಕೆಲವು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿದ ಎಂಡಿ ಇಂಡಿಯಾ ಇನ್ಷೂರೆನ್ಸ್ ಕಂಪೆನಿಯ ಯೋಗೇಶ್, ವಿಐಎಸ್’ಎಲ್ ನಿವೃತ್ತ ಕಾರ್ಮಿಕರಿಗಾಗಿ ಎಸ್’ಎಐಎಲ್ ನಮ್ಮ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಎಲ್ಲ ನೌಕರರಿಗೆ ಭದ್ರಾ ನರ್ಸಿಂಗ್ ಹೋಂನಲ್ಲಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.
Also read: ಖ್ಯಾತ ರೂಪದರ್ಶಿ, ಕಿರುತೆರೆ ನಟಿ ಅಪಾರ್ಟ್’ಮೆಂಟ್’ನಲ್ಲಿ ಶವವಾಗಿ ಪತ್ತೆ
ಸಭೆಯಲ್ಲಿ ಬಿ.ಆರ್. ನಾಗರಾಜ್, ರಾಮಲಿಂಗಯ್ಯ, ನರಸಿಂಹಾಚಾರ್, ಬಸವರಾಜ್, ಹನುಮಂತರಾವ್, ಶಂಕರ್ ಹಾಗೂ ಇತರ ಸದಸ್ಯರು ಪಾಲ್ಗೊಂಡಿದ್ದರು.
ಸಭೆಯ ನಂತರ ನಿವೃತ್ತ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post