ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಇಲ್ಲಿನ ಬಿಇಒ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್’ನಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಸ್ವಲ್ಪದಲ್ಲಿ ಭಾರೀ ಅನಾಹುತ ತಪ್ಪಿದೆ.
ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್’ನಲ್ಲಿ ಸೋರಿಕೆಯಾಗಿ ಅಡುಗೆ ತಯಾರು ಮಾಡುತ್ತಿದ್ದ ಮೂರು ಜನರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದೆ. ತತಕ್ಷಣವೇ ಅಲ್ಲಿದ್ದವರು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಠವಷಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ತಹಶೀಲ್ದಾರ್ ರಘುಮೂರ್ತಿ ಭೇಟಿ:
ಇನ್ನು, ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎನ್. ರಘುಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Also read: ಲಡಾಖ್ ನಲ್ಲಿ ಭೀಕರ ಅಪಘಾತ: 7 ಭಾರತೀಯ ಸೇನಾ ಯೋಧರು ಹುತಾತ್ಮ
ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು, ಬಡವರಿಗೆ, ಕಾರ್ಮಿಕರಿಗೆ, ಶಾಲೆ ಮಕ್ಕಳಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು, ತಿಂಡಿ ಹಾಗೂ ಊಟ ಸ್ವಚ್ಚವಾಗಿ ರುಚಿಯಾಗಿ ತಯಾರಿಸಬೇಕು ಎಂದು ಸೂಚಿಸಿದರು.
ಅಡಿಗೆ ತಯಾರು ಮಾಡುವಾಗ ಎಚ್ಚರ ವಹಿಸಬೇಕು. ಗ್ಯಾಸ್’ನಿಂದ ಅಡುಗೆ ತಯಾರು ಮಾಡುತ್ತಿರುವ ಉದ್ದೇಶದಿಂದ ಗ್ಯಾಸ್ ಬಳಕೆ ಹಾಗೂ ಅದರ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದರೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗುತ್ತದೆ. ನಿನ್ನೆ ಆಗಿರುವ ಘಟನೆ ವಿಷಾದನೀಯ. ಆದರೆ ಸದ್ಯ ಸಣ್ಣ ಅವಘಡದಲ್ಲೇ ಮುಗಿದಿದೆ. ಇಂತಹ ಅವಘಡಗಳು ಪುನಃ ಸಂಭವಿಸದಂತೆ ಇಲ್ಲಿನ ವ್ಯವಸ್ಥಾಪಕರು ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ತಿಂಡಿ ತಿಂದು, ರುಚಿ ನೋಡಿ ಅಲ್ಲಿ ತಿನ್ನುವವರೊಂದಿಗೆ ರುಚಿ ಹೇಗಿದೆ ಎಂದು ವಿಚಾರಿಸಿದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post