ಕಲ್ಪ ಮೀಡಿಯಾ ಹೌಸ್ | ಮುಂಬೈ |
ಸಮಾಜಮುಖಿ ಕಾರ್ಯಗಳನ್ನು ಹೆಚ್ಚು ತೊಡಗಿಸಿಕೊಂಡಿರುವ ಬಹುಭಾಷಾ ನಟ ಸೋನು ಸೂದ್ ಅವರು ಈಗ ಇಂತಹುದ್ದೇ ಒಂದು ಕಾರ್ಯದಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಅಂಗ ವೈಕಲ್ಯದಿಂದ ಬಳಲುತ್ತಿರುವ ಬಡ ವಿದ್ಯಾರ್ಥಿನಿಯೊಬ್ಬಳ ಸಹಾಯಕ್ಕೆ ಮುಂದಾಗಿರುವ ಸೋನು ಸೂದ್ Sonu sood ಕಾರ್ಯ ಈಗ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ಬಿಹಾರದ ಜಮುಯಿ ಜಿಲ್ಲೆಯವಳಾದ 10 ವರ್ಷದ ಸೀಮಾ ಎಂಬ ಅಂಗವಿಕಲ ಹುಡುಗಿಯ ಸಹಾಯಹಸ್ತ ನೀಡಿದ್ದಾರೆ. 2 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲನ್ನು ಕತ್ತರಿಸಬೇಕಾಯಿತು. ಆದರೂ ಹೆದರದೇ ಕುಗ್ಗದೇ ತನ್ನ ಓದಿನತ್ತ ಆಸಕ್ತಿ ತೋರಿದ್ದಾಳೆ. ಇನ್ನು ಆ ಹುಮ್ಮಸ್ಸಿನಿಂದಲೇ ತನ್ನ ಮನೆಯಿಂದ 1 ಕಿಲೋ ಮೀಟರ್ ದೂರವಿರುವ ಶಾಲೆಗೆ ಪ್ರತಿದಿನ ಕುಂಟುತ್ತಲೇ ಒಂದೇ ಕಾಲಿನಲ್ಲಿ ಹೋಗುತ್ತಿದ್ದಾಳೆ.
Also read: ಉಪೇಂದ್ರರ ಕಬ್ಜ ಸಿನಿಮಾ ಸ್ಪೆಷಲ್ ಸಾಂಗ್’ಗೆ ಬಾಲಿವುಡ್’ನಿಂದ ಹೀರೋಯಿನ್
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಚಾರ ತಿಳಿದ ಸೋನು ಸೂದ್ ಕೂಡ ಆಕೆಯ ಶಿಕ್ಷಣ ಹೊಣೆ ಹೊತ್ತಲು ಮುಂದಾಗಿದ್ದಾರೆ.
ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post