ಕಲ್ಪ ಮೀಡಿಯಾ ಹೌಸ್ | ಮುಂಬೈ |
ಸ್ವಂತ ಮಗಳ ಮೇಲೆಯೇ ದುಷ್ಟ ತಂದೆಯೊಬ್ಬ ಅತ್ಯಾಚಾರವೆಸಗಿ, ಆಕೆಯನ್ನು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದೆ.
32 ವರ್ಷದ ತಂದೆಯೊಬ್ಬ ತನ್ನ 5 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದನು. ಈ ವಿಚಾರ ತಿಳಿದ ಆತನ ಪತ್ನಿ ಭಾರೀ ಪ್ರತಿರೋಧ ವ್ಯಕ್ತಪಡಿಸಿ, ವಾಗ್ವಾದ ಮಾಡಿದ್ದಳು. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ಆತ ಮಗುವಿಗೆ ಹೊಡೆದು, ಕತ್ತು ಹಿಸುಕಿ ಹತ್ಯೆ ಮಾಡಲು ಯತ್ನಿಸಿದ್ದಾನೆ.
ಇದರಿಂದ ಎಚ್ಚೆತ್ತ ಆತನ ಪತ್ನಿ ತತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಇದರ ಅನ್ವಯ ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Also read: ನನ್ನದು ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿ: ಡಿ.ಎಸ್. ಅರುಣ್ ಭರವಸೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post