No Result
View All Result
Bharat gen unveils ‘Sutra’ at India AI Impact Summit, an initiative to enhance News Accessibility
English Articles

Bharat gen unveils ‘Sutra’ at India AI Impact Summit, an initiative to enhance News Accessibility

by ಕಲ್ಪ ನ್ಯೂಸ್
February 20, 2026
0

Kalpa Media House  |  New Delhi  | India Today Group has announced the debut of Sutra, a new AI-driven news...

Read moreDetails
Nava Carnataka Vaibhavam-Neo Carnatic Soundscapes

Nava Carnataka Vaibhavam-Neo Carnatic Soundscapes

February 20, 2026
HOSMAT Hospitals Partners with South United Football Club as Official Sports Medicine & Medical Services Leader

HOSMAT Hospitals Partners with South United Football Club as Official Sports Medicine & Medical Services Leader

February 15, 2026
Saptavarna Sangeetham “Rainbow of music” Swarathmika

Saptavarna Sangeetham “Rainbow of music” Swarathmika

February 14, 2026
60% of Indians have received an invite to a dating app or site later found to be fake

60% of Indians have received an invite to a dating app or site later found to be fake

February 12, 2026
  • Advertise With Us
  • Grievances
  • About Us
  • Contact Us
Saturday, February 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಿತ್ರದುರ್ಗ

ಚಳ್ಳಕೆರೆ: ಜಿಲ್ಲೆಯಲ್ಲಿ ಜೆಡಿಎಸ್ ಸಂಘಟಿಸಲು ವೀರೇಂದ್ರ ಪಪ್ಪಿಯವರ ಶ್ರಮ ಅಪಾರ

ವಿಧಾನಪರಿಷತ್ ಟಿಕೆಟ್ ನಿರಾಕರಣೆ ಹಿನ್ನೆಲೆ ಕಾರ್ಯಕರ್ತರ ಸಭೆಯಲ್ಲಿ ಸಮರ್ಥರಾಯ್ ಹೇಳಿಕೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 30, 2022
in ಚಿತ್ರದುರ್ಗ
0
ಚಳ್ಳಕೆರೆ: ಜಿಲ್ಲೆಯಲ್ಲಿ ಜೆಡಿಎಸ್ ಸಂಘಟಿಸಲು ವೀರೇಂದ್ರ ಪಪ್ಪಿಯವರ ಶ್ರಮ ಅಪಾರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ |

ಇಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಕೆ.ಸಿ. ವೀರೇಂದ್ರ ಪಪ್ಪಿರವರು ಸುಮಾರು ಹತ್ತರಿಂದ ಹದಿನೈದು ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ನಿರಂತರ ಒಡನಾಟ ಬೆಳೆಸಿ, ಪಕ್ಷವನ್ನು ಜೀವಂತವಾಗಿ ಇರಲು ಕಾರಣಿ ಭೂತರಾಗಿದ್ದಾರೆ ಎಂದು ಮಾಜಿ ತಾಪಂ ಸದಸ್ಯ ಹೆಚ್. ಸಮರ್ಥರಾಯ್ ಹೇಳಿದ್ದಾರೆ

ನಗರದ ಪ್ರವಾಸಿ ಮಂದಿರದಲ್ಲಿ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ವಿಧಾನ ಪರಿಷತ್‌ಗೆ ಟಿಕೆಟ್ ಸಿಗದ ಕಾರಣ ವರಿಷ್ಠರ ಈ ನಿರ್ಧಾರಕ್ಕೆ ಎಚ್ಚರಿಕೆ ನಿಡಲು ಆಯೋಜಿಸಿದ್ದ ಸಭೆಯಲ್ಲಿ ಗಾಂಧಿನಗರ, ಮದಕರಿನಗರ, ಅಂಬೇಡ್ಕರ್‌ನಗರ, ಹಳೆನಗರ, ನಗರಂಗೆರೆ, ಹಿರಿಯೂರು ಮೊಳಕಾಲ್ಮುರು, ರಾಂಪುರ, ಪರುಶುರಾಂಪುರ, ಹೊಸದುರ್ಗದ ಹಾಗೂ ತಾಲೂಕಿನ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸಂಪೂರ್ಣ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡುವುದಲ್ಲಿ ಕೆಸಿ. ವೀರೇದ್ರರ ಪ್ಪಪಿ ಅವರ ಪಾತ್ರ ತುಂಬಾ ಇದೆ. ಕಳೆದ 2018ರಲ್ಲಿ ಚಿತ್ರದುರ್ಗ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ಶ್ರಮದಿಂದ ಅಧಿಕ ಮತಗಳನ್ನು ಗಳಿಸಲು ಸಹಕರಿಸಿದ್ದಾರೆ. ಹಾಗೂ ಹೊರ ಜಿಲ್ಲೆಗಳಿಂದ ಬರುವ ಹಲವು ಕಾರ್ಯರ್ತರಿಗೆ ವೈಯಕ್ತಿಕ ಸಹಾಯ ಮಾಡುವುದರ ಮೂಲಕ ಪಕ್ಷ ಸಂಘನೆಯ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದರು.

ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ, ಕೊನೆ ಗಳಿಕೆಯಲ್ಲಿ ಟಿಕೆಟ್ ನೀಡದೆ ಮಧ್ಯ ಕರ್ನಾಟಕ ಭಾಗದ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ. ಯಾವ ಮಾನದಂಡದ ಮೇಲೆ ಟಿ.ಎ. ಶರವಣರವರಿಗೆ ಟಿಕೆಟ್ ನೀಡಿದ್ದೀರಿ? ನಮ್ಮ ಪಪ್ಪಿ ಅವರಿಗೆ ಯಾಕೆ ಕೊಡಲಿಲ್ಲ ಎಂಬುದು ವರಿಷ್ಠರು ಕಾರ್ಯಕರ್ತರಿಗೆ ಉತ್ತರ ನೀಡಬೇಕಿದೆ ಎಂದರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಂದ ಗೆಲ್ಲಿಸಿಕೊಳ್ಳುವ ಶಕ್ತಿ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗಿದೆ. ರಾಜ್ಯದಲ್ಲಿ ಪ್ರಬಲವಾದ ವೀರಶೈವ ಸಮಾಜದ ವತಿಯಿಂದ ಪ್ರತಿನಿಧಿಸಿದ ಕೆ.ಸಿ. ವೀರೇಂದ್ರ ಪಪ್ಪಿರವರು ಜಿಲ್ಲೆಯ ಎಲ್ಲಾ ಹಂತದ ಚುನಾವಣೆಯಲ್ಲಿ ಪಕ್ಷದ ಜೊತೆಗೆ ಗುರುತಿಸಿಕೊಂಡು ಅವರು ವೈಯಕ್ತಿಕ ಸಹಾಯಧನ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಿದ್ದಾರೆ ಎಂದರು.

ನಗರಸಭೆ ಉಪಾಧ್ಯಕ್ಷ ಟಿ. ವಿಜಯ್‌ಕುಮಾರ್, ಮಾತನಾಡಿ, ನಿಧಾನವಾಗಿ ರಾಜಕೀಯದಲ್ಲಿ ಸಾಗಿ, ದೀರ್ಘಕಾಲದ ಪಕ್ಷದ ನಿಷ್ಠೆಗೆ ಬಧ್ಧರಾಗಿದ್ದಾರೆ. ಪ್ರಬುದ್ಧ ನಡೆ ಹೊಂದಿರುವ ಪಪ್ಪಿ ಅವರಿಗೆ ಟಿಕೆಟ್ ನಿರಾಕರಿಸಿರುವುದು ದುರಂತ. ಈಡೀ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಆಲದ ಮರದ ಬೇರು ಅದರ ಕೊಂಬೆಗಳು ಕಾರ್ಯಕರ್ತರು ಎನ್ನಬಹುದು. ಹಣ ಎಲ್ಲರಿಂದ ಸಿಗಬಹುದು. ಆದರೆ ಒಳ್ಳೆಯ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಇಂತಹ ಒಳ್ಳೆಯ ತನವಿರುವ ಪಪ್ಪಿಯನ್ನು ವರಿಷ್ಠರು ಕೈ ಬಿಟ್ಟಿರುವುದು ಖಂಡನೀಯ ಎಂದರು.

ಕೆ.ಸಿ. ವೀರೇಂದ್ರರವರು ಎಂದು ಕೂಡ ಅಧಿಕಾರದ ಹಿಂದೆ ಹೊದವರಲ್ಲ. ಆದರೆ ನಿವೇ ಆಸೆ ಹುಟ್ಟಿ ಹಾಕಿ ಇಗ ಕೊನೆ ಗಳಿಗೆಯಲ್ಲಿ ಅಧಿಕಾರ ಕೊಡುವುದಕ್ಕಿಂತ ಅವಮಾನ ಮಾಡಿದಂತಾಗಿದೆ ಎಂದರು.

Also read: ಖಗ-ಮೃಗಗಳ ಹತ್ತಿರಕ್ಕೆ ಕರೆದೊಯ್ದ ಶಿಬಿರ

ಸಾಮಾಜಿಕ ಕಾರ್ಯಕರ್ತ ಹೆಚ್.ಎಸ್. ಸೈಯದ್ ಮಾತನಾಡಿ, ಇಂತಹ ಅತುರದ ವರಿಷ್ಠರ ನಿರ್ಧಾರದಿಂದ ಮಧ್ಯ ಕರ್ನಾಟಕದ ಭಾಗದ ಕಾರ್ಯರ್ತರಿಗೆ ನೋವಾಗಿದೆ. ಇಷ್ಟಾದರೂ ಕೂಡ ರಾಜ್ಯ ನಾಯಕರ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ವರಿಷ್ಠರ ಇಂತಹ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬೆಳೆಯುವುದಕ್ಕಿಂತ ಕುಂದಿ ಹೋಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡಿದರೆ, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿಮ್ಮ ಕೈ ಬಲಪಡಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹೊಯ್ಸಳ ಗೊವಿಂದರಾಜು, ಜೆಡಿಎಸ್ ಕಾರ್ಯಕರ್ತ ಕೆಸಿ. ವೀರೇಂದ್ರ ಅಭಿಮಾನಿ ಮುರುಳಿ, ಹಿರಿಯೂರು ಮಂಜುನಾಥ್, ಶಿವಮೊಗ್ಗದ ಕಾರ್ಯಕರ್ತೆ ವಾಣಿ ಗಣೇಶ್, ಸೈಯದ್, ಟಿ.ಜೆ. ವೆಂಕಟೇಶ್, ಪ್ರಭು, ನನ್ನಿವಾಳ ನಾಗರಾಜ್, ಭಿಮಣ್ಣ, ಚಳ್ಳಕೆರೆ ಉಪ್ಪಾರಹಟ್ಟಿ, ದೊಡ್ಡೇರಿ, ಪ್ರಶಾಂತ್ ಪಚ್ಚಿ ಅಭಿಮಾನಿ ಬಳಗ, ನಾಯಕನಹಟ್ಟಿ, ಮನಮೈನಹಟ್ಟಿ, ಮಹದೇವಪುರ, ಬಾಲೇನಹಳ್ಳಿ, ರಾಂಜೋಗಿಹಳ್ಳಿ, ಮದಕರಿಪುರ, ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಸ್ತ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ನೂರಾರು ಕಾರ್ಯಕರ್ತ ಅಭಿಮಾನಿಗಳು ಭಾಗವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Bayaluseeme NewsChallakereChitradurgaKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಚಳ್ಳಕೆರೆಚಿತ್ರದುರ್ಗಬಯಲುಸೀಮೆಸುದ್ಧಿ
Share197Tweet123Send
Previous Post

ಖಗ-ಮೃಗಗಳ ಹತ್ತಿರಕ್ಕೆ ಕರೆದೊಯ್ದ ಶಿಬಿರ

Next Post

ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆ ಫಲಿತಾಂಶ: ಶಿವಮೊಗ್ಗದ ಡಾ. ಪ್ರಶಾಂತ್‌ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆ ಫಲಿತಾಂಶ: ಶಿವಮೊಗ್ಗದ ಡಾ. ಪ್ರಶಾಂತ್‌ ಆಯ್ಕೆ

ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆ ಫಲಿತಾಂಶ: ಶಿವಮೊಗ್ಗದ ಡಾ. ಪ್ರಶಾಂತ್‌ ಆಯ್ಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು: ರಾಷ್ಟ್ರಪತಿಗಳಿಗೆ ಮನವಿ

ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು: ರಾಷ್ಟ್ರಪತಿಗಳಿಗೆ ಮನವಿ

February 21, 2026
ಮಹಾ ಶಿವರಾತ್ರಿ | ಫೆ.15 ರಂದು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ವಿಶೇಷ ಪೂಜೆ

ಫೆ.24 ಹೊಸೂಡಿಯಲ್ಲಿ ಶತರುದ್ರಾಭಿಷೇಕ, ರುದ್ರ-ಪವಮಾನ ಹೋಮ

February 21, 2026
ಉದ್ಯಮಗಳಿಗೆ ಸುರಕ್ಷಿತ, ಸದೃಢ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ನೆರವಾಗುತ್ತಾ ಮ್ಯಾನೇಜ್‌ಇಂಜಿನ್

ManageEngine Continues Strong Growth, Enabling Enterprises to Build Secure & Resilient Digital Infrastructures

February 21, 2026
ಉದ್ಯಮಗಳಿಗೆ ಸುರಕ್ಷಿತ, ಸದೃಢ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ನೆರವಾಗುತ್ತಾ ಮ್ಯಾನೇಜ್‌ಇಂಜಿನ್

ಉದ್ಯಮಗಳಿಗೆ ಸುರಕ್ಷಿತ, ಸದೃಢ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ನೆರವಾಗುತ್ತಾ ಮ್ಯಾನೇಜ್‌ಇಂಜಿನ್

February 21, 2026
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

February 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL