ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಲೋಕಸೇವಾ ಆಯೋಗ-ಯುಪಿಎಸ್ ಸಿ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, 641ನೇ ಅಭ್ಯರ್ಥಿಯಾಗಿ ಶಿವಮೊಗ್ಗದ ಡಾ. ಬಿ.ಒ. ಪ್ರಶಾಂತ್ ಕುಮಾರ್ ಆಯ್ಕೆಯಾಗಿದ್ದಾರೆ.
ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಈ ಬಾರಿ ಶ್ರುತಿ ಶರ್ಮಾ ಯುಪಿಎಸ್ ಸಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಅಂಕಿತಾ ಅಗರ್ವಾಲ್ 2ನೇ ರ್‍ಯಾಂಕ್, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಡಾ. ಪ್ರಶಾಂತ್ ಬಿ.ಒ ಶಿವಮೊಗ್ಗದ ವಿನೋಬ ನಗರದ ನಿವಾಸಿಯಾಗಿದ್ದು, ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಮುಗಿಸಿದ್ದಾರೆ. 2020 ರಲ್ಲಿ ಪದವಿ ಪಡೆದುಕೊಂಡ ಡಾ. ಪ್ರಶಾಂತ್ ಯುಪಿಎಸ್ ಸಿ ಯ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.
ಇವರ ತಾಯಿ ರೇಖಾ, ತಂದೆ ಓಂಕಾರಪ್ಪ ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿನಂದನೆ:
ಡಾ. ಪ್ರಶಾಂತ್‌ಕುಮಾರ್ ಯುಪಿಎಸ್‌ಸಿ ಪರಿಕ್ಷಾ ಫಲಿತಾಂಶದಲ್ಲಿ 621 ನೆಯ ರ್‍ಯಾಂಕ್ ಗಳಿಸಿದ್ದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ D S Arun ಅವರ ಮನೆಗೆ ಭೇಟಿ ನೀಡಿ, ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post