ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ವಿಷಯಗಳ ಸ್ಪಷ್ಟ ಅಧ್ಯಯನ ಅವಶ್ಯಕವಾಗಿದೆ ಎಂದು ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ವಿ. ಗುರುರಾಜ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ JNNC Engineering College ರಸಾಯನ ವಿಜ್ಞಾನ ವಿಭಾಗದ ವತಿಯಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಿಇಟಿ ಪರೀಕ್ಷೆ ಎದುರಿಸುವುದು ಹೇಗೆ ? ಶಿಕ್ಷಣ ತಜ್ಞರಿಂದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಸಾಮಾನ್ಯ ಶೈಕ್ಷಣಿಕ ಪರೀಕ್ಷೆಯಂತಲ್ಲ. ನೆನಪಿನ ಆಧಾರಿತ ಅಧ್ಯಯನಕ್ಕಿಂತ ವಿಷಯ ಸ್ಪಷ್ಟತೆ ಮುಖ್ಯ. ಆಗ ಮಾತ್ರ ವಿಷಯಾಧಾರಿತ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಪರೀಕ್ಷೆ ಎದುರಾದಂತೆಲ್ಲ ಅನೇಕ ಸಲಹೆಗಳು ಎದುರಾಗುತ್ತದೆ. ಅಂತಹ ಸಲಹೆಗಳಿಂದ ಗೊಂದಲಕ್ಕೆ ಒಳಗಾಗದೇ ಈಗಾಗಲೇ ಬಳಸಿರುವ ಅಧ್ಯಯನ ಸಾಮಾಗ್ರಿಗಳನ್ನೆ ಪರಿಣಾಮಕಾರಿಯಾಗಿ ಅಧ್ಯಯನ ನಡೆಸಿ ಎಂದು ಹೇಳಿದರು.
Also read: ಸೌಲಭ್ಯ ವಂಚಿತ ಮಕ್ಕಳ ನೆರವಿಗೆ ನಿಂತ ನಟಿ ಸಂಯುಕ್ತಾ ಹೊರನಾಡು…
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಸೀತಾಲಕ್ಷ್ಮೀ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಆಸಕ್ತಿದಾಯಕ ವಿಷಯಗಳು ಮತ್ತು ಭವಿಷ್ಯದ ಉನ್ನತ ಅವಕಾಶಗಳ ಆಧಾರದ ಮೇಲೆ ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಿ. ಪಿಯುಸಿ ನಂತರ ಎದರಿಸುತ್ತಿರುವ ಮೊದಲ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದೆ. ಪರೀಕ್ಷೆ ಎದುರಿಸುವಾಗ ಸುಲಭವಾದ ಮತ್ತು ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿದ ನಂತರ ಕಠಿಣ ಪ್ರಶ್ನೆಗಳನ್ನು ಉತ್ತರಿಸಿ. ಪರೀಕ್ಷೆಯ ಸಂಪೂರ್ಣ ಅವಧಿಯನ್ನು ಬಳಸಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಶುಭ ಹಾರೈಸಿದರು.
ಶಿಕ್ಷಣ ತಜ್ಞರಿಂದ ಪರೀಕ್ಷಾ ಟಿಪ್ಸ್ :
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ದೈನಂದಿನ ದಿನಚರಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ರಾತ್ರಿ ಹೆಚ್ಚು ನಿದ್ದೆ ಮಾಡಿ, ಪರೀಕ್ಷೆಯ ದಿನ ಧನಾತ್ಮಕವಾಗಿ ಆಲೋಚನೆಯನ್ನು ಮಾಡಿ, ಓಎಂಆರ್ ಪ್ರತಿಯಲ್ಲಿ ಉತ್ತರ ಆಯ್ಕೆ ಮಾಡುವಾಗ ಗಡಿಬಿಡಿ ಬೇಡ, ಪರೀಕ್ಷೆ ಶುರುವಾಗುವ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಓದಿನ ಕುರಿತು ಪರೀಕ್ಷಾ ಕೇಂದ್ರದಲ್ಲಿ ಚರ್ಚೆ ಬೇಡ.
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಮಂಜುನಾಥ. ಪಿ, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಹೆಚ್.ಮೊಯಿನುದ್ದಿನ್ ಖಾನ್, ಸಹಾಯಕ ಪ್ರಾಧ್ಯಾಪಕರಾದ ಡಾ.ಹೆಚ್.ಪಿ.ಸಚಿನ್, ಎಸ್.ಜಿ.ಚೇತನ್, ಬಿಂದು ಪವನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post