ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಚೆನ್ನಮ್ಮ ವಿನೋಬನಗರ ನಿವಾಸಿಗಳ ಅಭಿವೃದ್ಧಿ ಸಂಘ (ರಿ.) ವತಿಯಿಂದ ವಿನೋಬನಗರದ ಸರ್ಕಾರಿ ಪ್ರೌಢ ಶಾಲೆ ಪಕ್ಕದ ನೂತನ ಬಿಲ್ವ ಬೃಂದಾವನದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ ಸಸಿ ನೆಟ್ಟು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ರಾಹುಲ್ ಬಿದರೆ, ಕೆಳದಿ ಚೆನ್ನಮ್ಮ ವಿನೋಬನಗರ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ವಿನಯ ರಾಯ್ಕರ್, ಡಾ. ಚಂದ್ರಶೇಖರ್ ಹಾಗೂ ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.
Also read: ಸಂಶೋಧನೆಗೆ ಹೊಸ ರೂಪಕೊಟ್ಟವರು ರಾಮಭಟ್ಟರು: ಬೆಕ್ಕಿನಕಲ್ಮಠ ಶ್ರೀ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















