ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಧ್ಯಾತ್ಮಕ ಸಂತರೊಬ್ಬರ ಜೀವನಾಧಾರಿತ ಕಥೆಯೊಂದು ಸಿನಿಮಾವಾಗಿ ತೆರೆ ಕಾಣಲು ಸಿದ್ಧವಾಗಿದ್ದು, ಸಚೀನ್ ಸುವರ್ಣ ಐತಿಹಾಸಿಕ ವ್ಯಕ್ತಿ ಅಲ್ಲಮ ಪ್ರಭು ಪಾತ್ರದಲ್ಲಿ ಬೆಳ್ಳಿತೆರೆ ಮೇಲೆ ಬರಲಿದ್ದಾರೆ.
ನಿರ್ದೇಶಕ ಶಂಕರ್ ಸಿಂಗ್ ಅವರ ಪ್ರಭು ಲಿಂಗ ಲೀಲಾ ಕಥೆ ಆಧರಿಸಿರುವ ಶ್ರೀ ಅಲ್ಲಮಪ್ರಭು Shri Allamaprabhu ಚಿತ್ರವನ್ನು ಸಹಾಯಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಅನುಭವ ಹೊಂದಿರುವ ಶರಣ್ ಗದ್ವಾಲ್ ನಿರ್ದೇಶಿಸಿದ್ದಾರೆ. ಕುಮಾರ್ ಈಶ್ವರ್ ಸಂಗೀತ ಸಂಯೋಜಿಸಿದ್ದು, ಆರ್. ಗಿರಿ ಛಾಯಾಗ್ರಹಣ ನಿರ್ವಹಿಸಿದ್ದಾರೆ.
Also read: ರೈಲ್ವೆ ಹಳಿ ಬಳಿ ಆತ್ಮಹತ್ಯೆಗೆ ಮುಂದಾದ ಮಹಿಳೆಯನ್ನು ರಕ್ಷಿಸಿದ ಸಾರ್ವಜನಿಕರು!
ಮಾದವಾನಂದ ಅವರು ಮಹಾವೀರ್ ಪ್ರಭು ಸಹಯೋಗದಲ್ಲಿ ನಿರ್ಮಾಣವಾಗಿರುವ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನೀನಾಸಂ ಅಶ್ವಥ್ ಶ್ರೀ ಬಸವೇಶ್ವರನಾಗಿ ಮತ್ತು ರಘು ಭಟ್ ಬಿಜ್ಜಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post