ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಹಠಾತ್ ನಿಧನರಾದ, ಕಾಫಿ ಡೇ ಮಾಲೀಕ, ಮಾಜಿ ಸಿಎಂ ಎಸ್.ಎಂ. ಕೃಷ್ಣ Former CM S M Krishna ಅವರ ಅಳಿಯ ಸಿದ್ಧಾರ್ಥ ಅವರ ಜೀವನಗಾಥೆ ಬಯೋಪಿಕ್ ಆಗಿ ತೆರೆಗೆ ಬರಲಿದೆ.
ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಅವರು ಸಾಮಾಜಿಕ ಜಾಲತಾಣ ಕೂನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್ , ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಕಾಫಿ ದೊರೆಯ ಜೀವನ ಗಾಥೆಯನ್ನು ಪ್ರಸ್ತುತ ಪಡಿಸಲು ಸಜ್ಜಾಗಿವೆ.
ಪ್ರಾಮಾಣಿಕ, ನಿಷ್ಕಳಂಕ ಆದರ್ಶಪ್ರಾಯರೆನಿಸಿದ ಸಿಸಿಡಿ ಸಂಸ್ಥಾಪಕ ಸಿದ್ದಾರ್ಥ Siddharth ಅವರ ನಿಗೂಢ ಸಾವು ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಾವಿರಾರು ಕೋಟಿಯ ಆಸ್ತಿ ಹೊಂದಿದ್ದರು ಅವರು ಯಾವತ್ತೂ ಸಂಪತ್ತಿನ ಗತ್ತನ್ನು ತೋರಿದವರಲ್ಲ. ಸದಾ ಸರಳವಾಗಿದ್ದ ಅವರ ಸಾವು ಅನೇಕರಿಗೆ ಆಘಾತವನ್ನೇ ಉಂಟು ಮಾಡಿತ್ತು.
Also read: ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂದೆ-ಮಗ ಎದುರು-ಬದುರಾದಾಗ ಕ್ಲಿಕ್ಕಿಸಿದ ಅದ್ಭುತ ಸೆಲ್ಫಿ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post