ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಶಿಂಡ್ಲಿ ಗ್ರಾಮದ ಚೈತ್ರ ಆರ್. ಶರ್ಮಾ ಡಾಕ್ಟರೇಟ್ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ನಾತಕ ಪದವಿ ಗಳಿಸಿ ಈಚಗೆ ಎಂಡೋಕ್ರೈನ್ ಅಂಡ್ ಮೊಲೆಕ್ಯುಲರ್ ಆಸ್ಪೆಕ್ಟ್ಸ್ ಆಫ್ ಅರ‍್ಲಿ ಎಂಬ್ರ್ಯೋನಿಕ್ ಡೆವಲಪ್‌ಮೆಂಟ್ ಇನ್ ಮೌಸ್ “ಮುಸ್ ಮಸ್ಕ್ಯುಲಸ್” ವಿಷಯವಾಗಿ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದ್ದಾರೆ.
ಧಾರವಾಡ ವಿವಿಯಲ್ಲಿ ಪ್ರಾಣಿಶಾಸ್ತ್ರದ ವ್ಯಾಸಂಗ ಪಡೆದಿರುವ ಇವರು ಪ್ರಥಮ ರ‍್ಯಾಂಕ್ ಗಳಿಸಿ 6 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಇವರ ಡಾಕ್ಟರೇಟ್ ವಿಷಯಕ್ಕೆ ವಿವಿಯ ಡಾ. ಲಕ್ಷ್ಮೀ ಇನಾಂದಾರ್ ಮಾರ್ಗದರ್ಶಿಯಾಗಿದ್ದು, ಡಿಎಸ್‌ಟಿ ಇನ್ಸ್ಪೈರ್ ಜೂನಿಯರ್ ಮತ್ತು ಸೀನಿಯರ್ ರಿಸರ್ಚ್ ಫೆಲೋಶಿಪ್ ಗಳಿಸಿದ್ದಾರೆ.
Also read: ಫೋಟೋಗೆ ಪೋಸ್ ನೀಡಿ ಮಾಯವಾದ ಅಪರೂಪದ ಜೀವಿ! ಯಾವ ಪ್ರಾಣಿ ಇದು ಗೊತ್ತಾ?

ಸೊರಬ ತಾಲ್ಲೂಕು ಹರೀಶಿ ಗ್ರಾಮಾಂತರ ಶಾಲೆಯಲ್ಲಿ ನಂತರ ಶಿರಸಿಯ ಕಾಲೇಜಿನಲ್ಲಿ ವ್ಯಾಸಂಗ ಗಳಿಸಿರುವ ಇವರು ಪ್ರಸ್ತುತ ಬೆಂಗಳೂರು ಸ್ಟೇಟ್ ಫಾರೆನ್ಸಿಕ್ ಸೈನ್ಸ್ ಲ್ಯಾಬರೇಟರಿಯಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ತಂದೆ ರಘಪತಿ ಶರ್ಮಾ, ತಾಯಿ ನಾಗರತ್ನ, ಪತಿ ಗೋವಿಂದ ಶಶಾಂಕ್. ಇವರ ಸಾಧನೆಗೆ ತಾಲ್ಲೂಕು ವಿಪ್ರಬಳಗವೂ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಮೆಚ್ಚುಗೆ ಸೂಚಿಸಿವೆ.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















