ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
2020 ರಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ವೈ ರವರು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೇಂಪಗೌಡರವರ ಪ್ರತಿಮೆಯ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಿ ಇಂದು ಮುಕ್ತಾಯ ಹಂತ ತಲುಪಿದೆ, ಕೆಂಪೇಗೌಡರು ಪಾಳೇಗಾರರಾಗಿ ಅನೇಕ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ, “ಬೆಂಗಳೂರಿನ ನಿರ್ಮಾತೃ ಆಗಿರುವ ಕೆಂಪೇಗೌಡರು ಕರೆ-ಕಟ್ಟೆ ಕಟ್ಟಿಸಿದರು, ಗುಡಿ-ಗೋಪುರ ನಿರ್ಮಿಸಿ, ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗವಕಾಶ ಸೃಷ್ಟಿಸಿ, ದೈವ ಭಕ್ತಿಯ ಪ್ರತೀಕವಾಗಿ ನಗರದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸುವುದರ ಜೊತೆಗೆ ಪುರಾತನ ದೇವಾಲಯಗಳನ್ನು ಕೂಡ ಪುನರುತ್ಥಾನ ಗೊಳಿಸಿದರು ಎಂದು ಸಂಸದ ಬಿ. ವೈ. ರಾಘವೇಂದ್ರ MP Raghavendra ತಿಳಿಸಿದರು.
ಶಿಕಾರಿಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಇಲಾಖೆಗಳು, ತಾಲ್ಲೂಕು ವಿವಿಧ ಸಂಘ-ಸಂಸ್ಥೆಗಳು ಹಾಗೂ ತಾಲ್ಲೂಕು ಒಕ್ಕಲಿಗ ಸಮಾಜದ ಇವರ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು Kempegowda Jayanthi ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ರೇಖಾ ಭಾಯಿ, ಒಕ್ಕಲಿಗ ಸಮಾಜದ ತಾಲೂಕು ಅಧ್ಯಕ್ಷರಾದ ಗಣೇಶಪ್ಪ, ತಹಶಿಲ್ದಾರ್ ಕವಿರಾಜ್, ಹಾಲಪ್ಪ, ಸಮಾಜದ ಬಂಧುಗಳು ಮತ್ತಿತರರು ಉಪಸ್ಥಿತರಿದ್ದರು.
Also read: ಕೆಂಪೇಗೌಡರ ಸೇವಾಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು: ಪವಿತ್ರಾ ರಾಮಯ್ಯ ಸಲಹೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post