ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಡಲ ಅಬ್ಬರ ಹೆಚ್ಚಾಗಿದ್ದು, ಪರಿಣಾಮವಾಗಿ ಬೈಕಂಪಾಡಿಯಲ್ಲಿ ತೀವ್ರತರವಾಗಿ ಕಡಲ್ಕೊರೆತ ಸಂಭವಿಸುತ್ತಿದೆ.
Also Read: ಭಾರೀ ಮಳೆಗೆ ಆಗುಂಬೆಯಲ್ಲಿ ಗುಡ್ಡ ಕುಸಿತ, ಸಂಚಾರ ತಾತ್ಕಾಲಿಕ ಸ್ಥಗಿತ
ಸುಮಾರು ಒಂದು ವಾರಕ್ಕೂ ಅಧಿಕ ಸಮಯದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ, ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ತೀವ್ರವಾಗಿ ಕಡಲ್ಕೊರೆತ ಸಂಭವಿಸುತ್ತಿದೆ.

ಅಲ್ಲದೇ, ಕಡಲ್ಕೊರೆತ ತಡೆಯಲು ಹಾಕಲಾಗಿದ್ದ ಮರಳು ಚೀಲದ ತಡೆಗೋಡೆಯೂ ಸಹ ಬಹುತೇಕ ಕೊಚ್ಚಿಹೋಗಿದ್ದು, ಈ ಪ್ರದೇಶದಲ್ಲಿರುವ ಮನೆಗಳಿಗೆ ಹಾನಿಯಾಗುವ ಆತಂಕವೂ ಸಹ ಇದೆ ಎಂದು ವರದಿಯಾಗಿದೆ.










Discussion about this post