ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ ಕೆರೆಯ ಕಟ್ಟೆಯೊಂದು ಒಡೆದು ಉಪ್ಪಳ್ಳಿ ಬಡಾವಣೆಗೆ ನೀರು ನುಗ್ಗಿ ಸಂಕಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಕಳೆದ ಒಂದು ವಾರದಿಂದ ವರುಣ ನಿರಂತರವಾಗಿ ಅಬ್ಬರಿಸುತ್ತಿದ್ದಾನೆ. ಪರಿಣಾಮವಾಗಿ ನೀರಿನ ಅಬ್ಬರ ಹೆಚ್ಚಾಗಿ ಇಲ್ಲಿನ ಕೆರೆಯ ಕಟ್ಟೆ ಒಡೆದು ಹೋಗಿದೆ. ಉಪ್ಪಳ್ಳಿಯ ಬಡಾವಣೆಗೆ ನೀರು ನುಗ್ಗಿದ್ದು, ಅಕ್ಷರಶಃ ದ್ವೀಪದಂತೆ ಪರಿವರ್ತನೆಯಾಗಿದೆ. ಪರಿಣಾಮವಾಗಿ ಜನರು ಸಂಕಷ್ಟದಲ್ಲಿದ್ದು, ಸಂಚಾರ ದುಸ್ಥರವಾಗಿದೆ ಎಂದು ವರದಿಯಾಗಿದೆ.










Discussion about this post